HomeKarnatakaPM Vishwakarma Scheme : ಕುಶಲಕರ್ಮಿಗಳಿಗೆ ಗುಡ್ ನ್ಯೂಸ್ : ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

PM Vishwakarma Scheme : ಕುಶಲಕರ್ಮಿಗಳಿಗೆ ಗುಡ್ ನ್ಯೂಸ್ : ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಬಳ್ಳಾರಿ : ಕೇಂದ್ರ ಸರ್ಕಾರದ ಪಿ.ಎಂ-ವಿಶ್ವಕರ್ಮ ಯೋಜನೆಯಡಿ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ವಿವಿಧ ಸೌಲಭ್ಯಗಳಿಗಾಗಿ ಒಟ್ಟು 18 ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೌಲಭ್ಯಗಳು:

ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ, ಐ.ಡಿ. ಕಾರ್ಡ್, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೇಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸೌಲಭ್ಯ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರು ಅರ್ಹರು?

ಈ ಯೋಜನೆಯು 18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಿಗರು ಮತ್ತು ಕುಶಲಕರ್ಮಿಗಳನ್ನು ಒಳಗೊಳ್ಳುತ್ತದೆ. ಅದರಲ್ಲಿ ಬಡಗಿ, ದೋಣಿ ತಯಾರಕರು, ಶಸ್ತ್ರಾಸ್ತ್ರ ತಯಾರಿಸುವವರು (ಆರ್ಮರ್), ಕಮ್ಮಾರರು, ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ/ಚಾಪೆ/ಪೆÇರಕೆ/ಸೆಣಬು ನೇಯುವವರು, ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂ ಮಾಲೆ ತಯಾರಕರು, ಮಡಿವಾಳರು, ಟೈಲರ್, ಮೀನಿನ ಬಲೆಯ ತಯಾರಕರು ಅರ್ಹರಾಗಿರುತ್ತಾರೆ.ಈ ಮೇಲಿನ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಗ್ರಾಮ ಪಂಚಾಯತ್/ಮಟ್ಟದಲ್ಲಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೊಂದಣಿ ಮಾಡಿಕೊಳ್ಳಬಹುದಾಗಿದೆ.

*ಅರ್ಹತೆಗಳು:

ಕುಶಲಕರ್ಮಿಗಳು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು, 18 ವರ್ಷ ಮೇಲ್ಪಟ್ಟವರಾಗಿರಬೇಕು, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರು (ಕುಟುಂಬದಲ್ಲಿನ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು), ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು, ಕುಶಲಕರ್ಮಿಗಳು ಮುದ್ರಾ ಮತ್ತು ಸ್ವ-ನಿಧಿ ಸಾಲ ಪಡೆದವರು ಸಾಲವನ್ನು ಹಿಂದಿರುಗಿಸಿರುವವರನ್ನು ಹೊರತುಪಡಿಸಿ ಬೇರೆ ಯಾವುದೇ ತರಹ ಸಾಲವನ್ನು ಪಡೆದಿರಬಾರದು.

*ತರಬೇತಿ ವಿವರ:

ಕುಶಲಕರ್ಮಿಗಳಿಗೆ ನೊಂದಣಿಯಾದ ನಂತರ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಗೌರವಧನ ಮತ್ತು ಇತರೆ ಭತ್ಯೆ ನೀಡಲಾಗುವುದು. ತರಬೇತಿಯ ನಂತರ ಪ್ರಮಾಣಪತ್ರದೊಂದಿಗೆ ರೂ.15000/- ಬೆಲೆಬಾಳುವ ಉಪಕರಣವನ್ನು ನೀಡಲಾಗುವುದು. ನಂತರ ಶೇ.5 ಬಡ್ಡಿ ದರದಲ್ಲಿ ರೂ.1,00,000/- ಸಾಲವಾಗಿ ನೀಡಲಾಗುವುದು. ತದನಂತರ 15 ದಿನಗಳವರೆಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಿ ಈಗಾಗಲೇ ಪಡೆದ ರೂ. 1,00,000/- ಸಾಲ ಮರುಪಾವತಿಯಾದ ನಂತರ ರೂ.2,00,000/-ಗಳ ಸಾಲವನ್ನು ಶೇ.5ರ ಬಡ್ಡಿ ದರದಲ್ಲಿ ನೀಡಲಾಗುವುದು ಹಾಗೂ ತಾವು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು.
ಕುಶಲಕರ್ಮಿಗಳು ಸಂಬಂಧಿಸಿದ ತಮ್ಮ ಗ್ರಾಮ ಪಂಚಾಯತ್/ಪಟ್ಟಣ ಪಂಚಾಯಿತಿ/ ತಾಲ್ಲೂಕು/ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತ್ವರಿತವಾಗಿ ನೊಂದಣಿ ಮಾಡಿಕೊಳ್ಳಬಹುದು
ಮಾಹಿತಿಗಾಗಿ www.pmvishwakarma.gov.in ಗೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆಯ ಮಾರ್ಗಸೂಚಿಗಳನ್ನು ನೋಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಿಎಸ್ಸಿಯ ಜಿಲ್ಲಾ ವ್ಯವಸ್ಥಾಪಕರ ಮೊ.7217624098, 9902397780. ಜಿಲ್ಲಾ ಕೈಗಾರಿಕಾ ಕೇಂದ್ರದ ಮೊ.7795499904, 8073618080. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಮೊ.9900126430, 9449226221 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಸೋಮನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular