HomeKarnatakaಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ಚಿತ್ರದುರ್ಗ: ಅನ್ನಭಾಗ್ಯ ಯೋಜನೆಯಡಿ ಮೇ ಮತ್ತು ಜೂನ್-2026ರ ಎರಡು ಮಾಹೆಗಳ ಆಹಾರಧಾನ್ಯವನ್ನು ಜೂನ್-2026ರ ಮಾಹೆಯಲ್ಲಿ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ.

ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರಧಾನ್ಯವನ್ನು ಬಯೋಮೆಟ್ರಿಕ್(ಬೆರಳುಚ್ಚು) ನೀಡಿ ಪಡೆದುಕೊಳ್ಳಬಹುದು.

ಮೇ-2026 ಮತ್ತು ಜೂನ್-2026ರ ಎರಡು ಮಾಹೆಗಳ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 04 ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ, 05 ಸದಸ್ಯರಿಗೆ 30 ಕೆ.ಜಿ, 06 ಸದಸ್ಯರಿಗೆ 50 ಕೆ.ಜಿ, 07 ಸದಸ್ಯರಿಗೆ 70 ಕೆ.ಜಿ., 08 ಸದಸ್ಯರಿಗೆ 90 ಕೆ.ಜಿ , 09 ಸದಸ್ಯರಿಗೆ 110 ಕೆ.ಜಿ, 10 ಸದಸ್ಯರಿಗೆ 130 ಕೆ.ಜಿ ಅಕ್ಕಿ ಉಚಿತ ಪಡೆದುಕೊಳ್ಳಬೇಕು. 10 ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

01 ರಿಂದ 03 ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗಳಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ.ಯಂತೆ ಈಗಾಗಲೇ ಎನ್.ಎಫ್.ಎಸ್.ಎ ಯೋಜನೆಯಡಿ ಮೇ-2026ರಲ್ಲಿ 35 ಕೆ.ಜಿ ಮತ್ತು ಜೂನ್-2026ರಲ್ಲಿ 35 ಕೆ.ಜಿ ಸೇರಿ ಒಟ್ಟು 70 ಕೆ.ಜಿ ಅಕ್ಕಿ ಹಾಗೂ ರಾಗಿ  ಆಹಾರಧಾನ್ಯಗಳನ್ನು ಮೇ-2026ರ ಮಾಹೆಯಲ್ಲೇ ವಿತರಣೆ ಮಾಡಲಾಗಿರುತ್ತದೆ. ಆದ್ದರಿಂದ ಇವರಿಗೆ ಜೂನ್-2026ರ ಮಾಹೆಯಲ್ಲಿ ಹಂಚಿಕೆ ಇರುವುದಿಲ್ಲ.

ಕೇಂದ್ರ ಮತ್ತು ರಾಜ್ಯ ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ದೊರೆಯಲಿದೆ. ಯಾವುದೇ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಅಥವಾ ಮಾಲೀಕರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದಲ್ಲಿ ಅಥವಾ ಹಣ ಕೇಳಿದಲ್ಲಿ ರಾಜ್ಯ ಸಹಾಯವಾಣಿ ಸಂಖ್ಯೆ 1967 ಹಾಗೂ ಜಂಟಿ ನಿರ್ದೇಶಕರ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಆಹಾರ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular