ನಟ ‘ಅಲ್ಲು ಅರ್ಜುನ್’ ಅಭಿನಯದ ಫುಷ್ಪ-2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಣ ಗಳಿಸಿದ್ದು, ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.
ಅಲ್ಲು ಅರ್ಜುನ್ ಅಭಿನಯದ ಈ ಚಿತ್ರವು ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಡಿಜಿಟಲ್ ಪಾದಾರ್ಪಣೆ ಮಾಡಿದೆ . ಆದರೆ ಪುಷ್ಪ-2 ಕನ್ನಡ ವರ್ಶನ್ ಇಲ್ಲ ಎಂಬುದು ಕನ್ನಡಾಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಸುಕುಮಾರ್ ನಿರ್ದೇಶನದ ಕಥಾಹಂದರ ಮತ್ತು ಛಾಯಾಗ್ರಹಣದ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಅಲ್ಲು ಅರ್ಜುನ್ ಅವರ ಅಭಿನಯವು ಎಲ್ಲರ ಗಮನ ಸೆಳೆದಿದೆ.ಇದು ಕೇವಲ ೩೨ ದಿನಗಳಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ೧೮೩೧ ಕೋಟಿ ರೂ.ಗಿಂತ ಹೆಚ್ಚು ಗಳಿಸಿದೆ.
ಪುಷ್ಪ 2: ದಿ ರೂಲ್ 2024 ರ ಭಾರತೀಯ ತೆಲುಗು ಭಾಷೆಯ ಆಕ್ಷನ್ ಡ್ರಾಮಾ ಚಲನಚಿತ್ರವಾಗಿದ್ದು, ಸುಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಸುಕುಮಾರ್ ರೈಟಿಂಗ್ಸ್ ಸಹಯೋಗದೊಂದಿಗೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಜಗಪತಿ ಬಾಬು, ಸುನೀಲ್ ಮತ್ತು ರಾವ್ ರಮೇಶ್ ಇದ್ದಾರೆ.