ಬೆಂಗಳೂರು:ಸಂಕ್ರಾಂತಿ ಮುಗಿದು ಮದುವೆ ಸೀಸನ್ ಶುರುವಾಗಿರೋದ್ರಿಂದ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹೀಗಿರುವಾಗ ಬೆಲೆಯಲ್ಲಿನ ಈ ಕುಸಿತ ಮಧ್ಯಮ ವರ್ಗದ ಜನರಿಗೆ ವರದಾನವಾಗಿದೆ. ಬೆಳ್ಳಿಯ ದರದಲ್ಲೂ ಕೂಡ ಗಣನೀಯ ಇಳಿಕೆ ಕಂಡುಬಂದಿದ್ದು ಒಟ್ಟಾರೆಯಾಗಿ ಹೂಡಿಕೆದಾರರಿಗೆ ಇದು ಸುವರ್ಣಾವಕಾಶ, ಬಂಗಾರ ಪ್ರಿಯರೇ ಇತ್ತ ಗಮನ ಕೊಡಿ ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಈಗ ಅಕ್ಷರಶಃ ನೆಲಕಚ್ಚುತ್ತಿದೆ. ನಿನ್ನೆ ಹೂಡಿಕೆದಾರರ ನಿದ್ದೆಗೆಡಿಸಿದ್ದ ಬೆಲೆ ಇಂದು (ಫೆಬ್ರವರಿ 6, ಶುಕ್ರವಾರ) ಭರ್ಜರಿ ಇಳಿಕೆ ಕಾಣುವ ಮೂಲಕ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ.
24 ಕ್ಯಾರಟ್ ಚಿನ್ನ (ಶುದ್ಧ ಚಿನ್ನ): ಪ್ರತಿ ಗ್ರಾಂಗೆ ಬರೋಬ್ಬರಿ 502 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 15,442 ರೂಪಾಯಿ ತಲುಪಿದೆ.
22 ಕ್ಯಾರಟ್ ಚಿನ್ನ (ಆಭರಣ ಚಿನ್ನ): ಪ್ರತಿ ಗ್ರಾಂಗೆ 460 ರೂಪಾಯಿ ಇಳಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ದೊಡ್ಡ ರಿಲೀಫ್ ನೀಡಿದೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ
ಬರಿ ಚಿನ್ನ ಅಷ್ಟೇ ಅಲ್ಲ ಬೆಳ್ಳಿ ಕೂಡ ಬೆಲೆ ಇಳಿಕೆಯ ಓಟ ಮುಂದುವರಿಸಿದೆ. ಇಂದು ಒಂದು ಗ್ರಾಂಗೆ 25 ರೂಪಾಯಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಳ್ಳಿ ದರ ಈ ಕೆಳಗಿನಂತಿದೆ:
1 ಗ್ರಾಂ ಬೆಳ್ಳಿ ಬೆಲೆ: ₹ 275
100 ಗ್ರಾಂ ಬೆಳ್ಳಿ ಬೆಲೆ: ₹ 27,500
1 ಕೆಜಿ ಬೆಳ್ಳಿ ಬೆಲೆ: ₹ 2,75,000
ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂತಿವೆ
| ಚಿನ್ನದ ವಿಧ | ಇಂದಿನ ಬೆಲೆ (1 ಗ್ರಾಂ) | 10 ಗ್ರಾಂ ಬೆಲೆ |
| 24 ಕ್ಯಾರೆಟ್ (ಅಪರಂಜಿ) | ₹ 15,235 | ₹ 1,52,350 |
| 22 ಕ್ಯಾರೆಟ್ (ಆಭರಣ ಚಿನ್ನ) | ₹ 13,965 | ₹ 1,39,650 |
| 18 ಕ್ಯಾರೆಟ್ (ಸಣ್ಣ ಆಭರಣ) | ₹ 11,426 | ₹ 1,14,260 |
24 ಕ್ಯಾರೆಟ್ ಚಿನ್ನದ ಇಂದಿನ ದರ (ಪ್ರತಿ 1 ಗ್ರಾಂಗೆ):
ನಗರಗಳು24 ಕ್ಯಾರೆಟ್ ಇಂದಿನ ದರ (1 ಗ್ರಾಂ)
ಚೆನ್ನೈ₹ 15,404
ಬೆಂಗಳೂರು₹ 15,235
ಮುಂಬೈ₹ 15,235
ಹೈದರಾಬಾದ್₹ 15,235
ಕೇರಳ₹ 15,235
ಪುಣೆ₹ 15,235
ಕೋಲ್ಕತ್ತಾ₹ 15,235
ದೆಹಲಿ₹ 15,250
ಅಹಮದಾಬಾದ್₹ 15,240
ವಡೋದರಾ₹ 15,240

