ಚಂಡೀಗಢ: ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಪೋಷಕರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಭಾರತ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್, ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಸುಲಿಗೆ ಆರೋಪದಲ್ಲಿ ಆತನ ಪೋಷಕರನ್ನು ಪಂಜಾಬ್ ನ ಮುಕ್ತಸರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗೋಲ್ಡಿ ಬ್ರಾರ್ ತಂದೆ ಶಂಶಿರ್ ಸಿಂಗ್ ಹಾಗೂ ತಾಯಿ ಪ್ರೀತ್ ಪಾಲ್ ಕೌರ್ ಮುಕ್ತಸರ್ ದ ಮನೆಯಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಸ್ ಎಸ್ ಪಿ ಅಭಿಮನ್ಯು ಮಾಹಿತಿ ನೀಡಿದ್ದಾರೆ.
ಫರೀದ್ ಕೋಟ್ ಜಿಲ್ಲೆಯವರಾದ ಶಂಶಿರ್ ಸಿಂಗ್ ಹಾಗೂ ಪ್ರೀತ್ ಪೌಲ್ ಕೌರ್ ದಂಪತಿ ವಿರುದ್ಧ 2024ರಲ್ಲಿ ಮುಕ್ತಸರ್ ವ್ಯಕ್ತಿಯೊಬ್ಬರು ಸುಲಿಗೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಲಾಗಿದೆ.
2022ರಲ್ಲಿ ಪಂಜಾಬಿ ಗಾಯಕ ಸಿಧು ಮೊಸಾವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಗೋಲ್ಡಿ ಬ್ರಾರ್ ಕೂಡ ಒಬ್ಬ. ಸಿಧು ಮೊಸಾವಾಲೆ ಹತ್ಯೆ ಪ್ರಕರಣದ ಹೊಣೆಯನ್ನು ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದ. ಪಂಜಾಬ್ ನಲ್ಲಿ ಗ್ಯಾಅಂಗ್ ಸ್ಟರ್ ಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಗೋಲ್ಡಿ ಬ್ರಾರ್ ತಂದೆ ತಾಯಿಯನ್ನು ಬಂಧಿಸಲಾಗಿದೆ.

