HomeBusinessಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ : ಬೆಳ್ಳಿ ಕೆಜಿಗೆ ₹5,000 ಕುಸಿತ ಇಂದಿನ ರೇಟ್ ಚೆಕ್...

ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ : ಬೆಳ್ಳಿ ಕೆಜಿಗೆ ₹5,000 ಕುಸಿತ ಇಂದಿನ ರೇಟ್ ಚೆಕ್ ಮಾಡಿ

ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ವಾರದ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ಜುಲೈ 2 ಮತ್ತು 3 ರಂದು ದಿಢೀರ್ ಜಂಪ್ ಆಗಿದ್ದ ಬಂಗಾರದ ಬೆಲೆ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದ್ದು, ಕಳೆದ ಎರಡು ದಿನಗಳಿಂದ ನಿರಂತರ ಇಳಿಕೆ ಹಾದಿ ಹಿಡಿದಿದೆ. ಇಂದು ಸೋಮವಾರ (ಜುಲೈ 6, 2026) ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಬರೋಬ್ಬರಿ 5,000 ರೂಪಾಯಿಗಳಷ್ಟು ಭಾರಿ ಕುಸಿತ ಕಂಡುಬಂದಿದೆ.ದೇಶೀಯ ಮಾರುಕಟ್ಟೆಯಲ್ಲಿ ಸತತವಾಗಿ ದುಬಾರಿಯಾಗುತ್ತಿದ್ದ ಹಳದಿ ಲೋಹದ ಬೆಲೆ ಇದೀಗ ತಗ್ಗುತ್ತಿರುವುದು ಆಭರಣ ಖರೀದಿದಾರರಲ್ಲಿ ನೆಮ್ಮದಿ ತಂದಿದೆ.

ಬೆಂಗಳೂರಿನ ಇಂದಿನ ಚಿನ್ನದ ದರ ಪಟ್ಟಿ (July 6, 2026):

24 ಕ್ಯಾರೆಟ್ (ಶುದ್ಧ ಚಿನ್ನ):

1 ಗ್ರಾಂ ಬೆಲೆ: ₹14,662 (₹11 ಇಳಿಕೆ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

10 ಗ್ರಾಂ ಬೆಲೆ: ₹1,46,620 (₹110 ಇಳಿಕೆ)

22 ಕ್ಯಾರೆಟ್ (ಆಭರಣ ಚಿನ್ನ):

1 ಗ್ರಾಂ ಬೆಲೆ: ₹13,440 (₹10 ಇಳಿಕೆ)

10 ಗ್ರಾಂ ಬೆಲೆ: ₹1,34,400 (₹100 ಇಳಿಕೆ)

18 ಕ್ಯಾರೆಟ್ ಚಿನ್ನ:

1 ಗ್ರಾಂ ಬೆಲೆ: ₹10,997

10 ಗ್ರಾಂ ಬೆಲೆ: ₹1,09,970

ಕೆಜಿಗೆ 5,000 ರೂಪಾಯಿ ಇಳಿಕೆಯಾದ ಬೆಳ್ಳಿ

ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದ್ದರೆ, ಇತ್ತ ಬೆಳ್ಳಿ ಬೆಲೆ ಮಾತ್ರ ಗ್ರಾಹಕರಿಗೆ ಭಾರಿ ಖುಷಿ ನೀಡಿದೆ. ಇಂದು ಒಂದೇ ದಿನ ಕೆಜಿ ಬೆಳ್ಳಿ ದರದಲ್ಲಿ ₹5,000 ಭಾರಿ ಕುಸಿತ ಕಂಡುಬಂದಿದೆ. ಈ ಇಳಿಕೆಯ ಬಳಿಕ ಬೆಂಗಳೂರಿನಲ್ಲಿ ಇಂದು 1 ಗ್ರಾಂ ಬೆಳ್ಳಿ ಬೆಲೆ ₹245 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹2,45,000 ಕ್ಕೆ ಬಂದು ತಲುಪಿದೆ.

ವಾರಾಂತ್ಯದಲ್ಲಿ (ವೀಕೆಂಡ್) ಸ್ಥಿರವಾಗಿದ್ದ ಚಿನ್ನ-ಬೆಳ್ಳಿ ದರಗಳು, ಸೋಮವಾರದ ವಹಿವಾಟಿನ ಆರಂಭದಲ್ಲೇ ಇಳಿಕೆಯ ಹಾದಿ ಹಿಡಿದಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರ ಓಡಾಟ ಹೆಚ್ಚಾಗುವಂತೆ ಮಾಡಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ನಗರಗಳ ಹೆಸರು ಚಿನ್ನದ ಬೆಲೆ

ಬೆಂಗಳೂರು ₹1,46,620

ನಾಗ್ಪುರ ₹1,46,620

ಮುಂಬೈ ₹1,46,620

ಚೆನ್ನೈ ₹1,47,930

ಕೋಲ್ಕತ್ತಾ ₹1,46,620

ಪಾಟ್ನಾ ₹1,46,670

ಸೂರತ್‌ ₹1,46,670

ಚಂಡೀಗಢ ₹1,46,770

ಲಕ್ನೋ ₹1,46,770

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular