ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಅಂತರರಾಷ್ಟ್ರೀಯ ರಾಜಕೀಯ ವಿದ್ಯಮಾನಗಳ ಪರಿಣಾಮವಾಗಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಿದ್ದರೂ, ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.ಇಂದು ಮೇ 7, 2026, ಗುರುವಾರ ಮಾರುಕಟ್ಟೆಯಲ್ಲಿ ದಾಖಲಾಗಿರುವ ಚಿನ್ನ ಮತ್ತು ಬೆಳ್ಳಿಯ ನಿಖರ ದರಗಳ ಮಾಹಿತಿ ಇಲ್ಲಿದೆ:
ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? (Gold Price Update)
ಇಂದು ಶುದ್ಧ ಚಿನ್ನ (24K) ಮತ್ತು ಆಭರಣ ಚಿನ್ನದ (22K) ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
ಇಂದು 10 ಗ್ರಾಂ ಬೆಲೆಯಲ್ಲಿ 330 ರೂ. ಏರಿಕೆಯಾಗಿದ್ದು, 1,52,460 ರೂಪಾಯಿ ತಲುಪಿದೆ.
1 ಗ್ರಾಂ ಬೆಲೆ ಇಂದು 33 ರೂ. ಏರಿಕೆಯಾಗಿ 15,246 ರೂ. ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
10 ಗ್ರಾಂ ಬೆಲೆಯಲ್ಲಿ 300 ರೂ. ಏರಿಕೆಯಾಗಿದ್ದು, 1,39,750 ರೂಪಾಯಿಗೆ ತಲುಪಿದೆ.
1 ಗ್ರಾಂ ಬೆಲೆ ಇಂದು 30 ರೂ. ಏರಿಕೆಯಾಗಿ 13,975 ರೂ. ಆಗಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ
ಚಿನ್ನಕ್ಕಿಂತಲೂ ವೇಗವಾಗಿ ಇಂದು ಬೆಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಶಾಕ್ ನೀಡಿದೆ.ಇಂದು ಬೆಳ್ಳಿಯ ಬೆಲೆಯಲ್ಲಿ ಪ್ರತೀ ಕೆಜಿಗೆ 5,000 ರೂಪಾಯಿ ಭಾರಿ ಏರಿಕೆಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ 2,70,000 ರೂಪಾಯಿ ತಲುಪಿದೆ.1 ಗ್ರಾಂ ಬೆಳ್ಳಿ ಬೆಲೆ 270 ರೂ. ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಂ)
ಚೆನ್ನೈ – ₹15,383
ಮುಂಬೈ – ₹15,246
ದೆಹಲಿ – ₹15,239
ಕೋಲ್ಕತ್ತಾ – ₹15,246
ಬೆಂಗಳೂರು – ₹15,246
ಹೈದರಾಬಾದ್ – ₹15,246
ಕೇರಳ – ₹15,246
ಪುಣೆ – ₹15,246
ವಡೋದರಾ – ₹15,251
ಅಹಮದಾಬಾದ್ – ₹15,251

