ಮದುವೆ ಸೀಸನ್ ಆರಂಭ ಬೆನ್ನಲ್ಲೇ ಆಭರಣ ಪ್ರಿಯರಿಗೆ ಮತ್ತೆ ದರ ಏರಿಕೆಯ ಶಾಕ್ ಎದುರಾಗಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ 750 ರೂಪಾಯಿಯಷ್ಟು ಜಿಗಿದಿದ್ದ ಚಿನ್ನದ ದರ, ಇಂದು ಸೋಮವಾರವೂ ಏರಿಕೆ ಹಾದಿಯಲ್ಲೇ ಸಾಗಿದೆ.ಆಗಸ್ಟ್ 24 ರ ಸೋಮವಾರದ ವಹಿವಾಟಿನಲ್ಲಿ 10 ಗ್ರಾಂ 24 ಕ್ಯಾರಟ್ (ಅಪರಂಜಿ) ಚಿನ್ನದ ಬೆಲೆಯಲ್ಲಿ ₹880 ರಷ್ಟು ಏರಿಕೆಯಾಗಿದ್ದರೆ, 22 ಕ್ಯಾರಟ್ ಆಭರಣ ಚಿನ್ನದ ಬೆಲೆ ₹800 ರಷ್ಟು ಹೆಚ್ಚಾಗಿದೆ. ಇತ್ತ ಬೆಳ್ಳಿ ದರದಲ್ಲಿ ಕಳೆದ 4 ದಿನಗಳಿಂದ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.
ಇಂದಿನ ಚಿನ್ನ-ಬೆಳ್ಳಿ ದರ ವಿವರ (ಆಗಸ್ಟ್ 24):
ಬೆಂಗಳೂರು ಮತ್ತು ಭಾರತದ ಪ್ರಮುಖ ನಗರಗಳಲ್ಲಿ:
24 ಕ್ಯಾರಟ್ ಚಿನ್ನ (10 ಗ್ರಾಂ): ₹1,63,970 (1 ಗ್ರಾಂಗೆ: ₹16,397)
22 ಕ್ಯಾರಟ್ ಚಿನ್ನ (10 ಗ್ರಾಂ): ₹1,50,300 (1 ಗ್ರಾಂಗೆ: ₹15,030)
18 ಕ್ಯಾರಟ್ ಚಿನ್ನ (1 ಗ್ರಾಂ): ₹12,293
ಬೆಳ್ಳಿ ದರ (1 ಕೆಜಿ): ₹2,60,000 (100 ಗ್ರಾಂಗೆ: ₹26,000 1 ಗ್ರಾಂಗೆ: ₹260)
(ಗಮನಿಸಿ: ತಮಿಳುನಾಡು, ಕೇರಳ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಬೆಳ್ಳಿ ದರ ಕೆಜಿಗೆ ₹2,70,000 ತಲುಪಿದೆ.)
ಜಾಗತಿಕ ಮಾರುಕಟ್ಟೆ ಚಲನವಲನ:
ದೇಶೀಯವಾಗಿ ಮದುವೆ ಸೀಸನ್ ಬೇಡಿಕೆಯಿಂದಾಗಿ ದರ ಏರಿಕೆಯಾಗಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಸಣ್ಣಮಟ್ಟದ ಇಳಿಕೆ ಕಂಡುಬಂದಿದೆ. ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ ಸುಮಾರು 7 ಡಾಲರ್ ಇಳಿಕೆಯಾಗಿ 4,618 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ ಜಾಗತಿಕವಾಗಿ ಸ್ಪಾಟ್ ಬೆಳ್ಳಿ ದರ ಶೇ. 1.24 ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್‌ಗೆ 68 ಡಾಲರ್ ತಲುಪಿದೆ.

