HomeBusinessಗೋಲ್ಡ್ ರೇಟ್ ಡೌನ್ :ಬೆಂಗಳೂರಲ್ಲಿ ಸತತವಾಗಿ ಕುಸಿಯುತ್ತಿದೆ ಚಿನ್ನದ ದರ ಬೆಳ್ಳಿಗೆ ಒಂದೇ ದಿನ ಬರೋಬ್ಬರಿ...

ಗೋಲ್ಡ್ ರೇಟ್ ಡೌನ್ :ಬೆಂಗಳೂರಲ್ಲಿ ಸತತವಾಗಿ ಕುಸಿಯುತ್ತಿದೆ ಚಿನ್ನದ ದರ ಬೆಳ್ಳಿಗೆ ಒಂದೇ ದಿನ ಬರೋಬ್ಬರಿ ₹5,000 ಕಡಿತ

ಬೆಂಗಳೂರು: ಚಿನ್ನದ ಪ್ರಿಯರಿಗೆ ಹಾಗೂ ಹೊಸದಾಗಿ ಮದುವೆ, ಶುಭಕಾರ್ಯಗಳಿಗೆ ಒಡವೆ ಖರೀದಿಸಲು ಯೋಜಿಸುತ್ತಿರುವ ಸಾರ್ವಜನಿಕರಿಗೆ ಬುಲಿಯನ್ ಮಾರುಕಟ್ಟೆಯಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಎಫೆಕ್ಟ್‌ನಿಂದಾಗಿ ಸಿಲಿಕಾನ್ ಸಿಟಿ ಸೇರಿದಂತೆ ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಸತತವಾಗಿ ಇಳಿಕೆ ಕಾಣುತ್ತಿವೆ.

ಕಳೆದ ಮೇ 26ರಿಂದ ಗಮನಿಸಿದರೆ, ಕೇವಲ ಒಂದೇ ಒಂದು ದಿನ ಮಾತ್ರ ಚಿನ್ನದ ದರ ಅಲ್ಪ ಏರಿಕೆಯಾಗಿದ್ದು, ಉಳಿದ ಎಲ್ಲಾ ದಿನಗಳಲ್ಲೂ ಬೆಲೆಗಳು ಸತತವಾಗಿ ಕುಸಿಯುತ್ತಾ ಬಂದಿರುವುದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಜೂನ್ 4ರ ಗುರುವಾರ: ಬೆಂಗಳೂರಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ? (10 ಗ್ರಾಂ ಲೆಕ್ಕದಲ್ಲಿ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂತಾರಾಷ್ಟ್ರೀಯ ರಾಜತಾಂತ್ರಿಕ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಏರಿಳಿತದ ಹಿನ್ನೆಲೆಯಲ್ಲಿ ಇವತ್ತು (ಜೂನ್ 4, ಗುರುವಾರ) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಲೆಗಳು ಮತ್ತಷ್ಟು ಇಳಿಕೆ ಕಂಡಿವೆ:

22 ಕ್ಯಾರೆಟ್ ಆಭರಣ ಚಿನ್ನ: ಹತ್ತು ಗ್ರಾಂಗೆ (೧ ತುಲಂ) ಇಂದು ₹100 ರಷ್ಟು ಇಳಿಕೆ ಕಂಡುಬಂದಿದ್ದು, ಪ್ರಸ್ತುತ ₹1,43,100 ಕ್ಕೆ ತಲುಪಿದೆ. (1 ಗ್ರಾಂ ಬೆಲೆ ₹14,310).

24 ಕ್ಯಾರೆಟ್ ಅಪರಂಜಿ ಚಿನ್ನ (Pure Gold): ಹತ್ತು ಗ್ರಾಂಗೆ ₹110 ರಷ್ಟು ಇಳಿಕೆಯಾಗಿದ್ದು, ಪ್ರಸ್ತುತ ₹1,56,110 ಮಟ್ಟಕ್ಕೆ ಕುಸಿದಿದೆ. (1 ಗ್ರಾಂ ಬೆಲೆ ₹15,611).

ಭಾರಿ ಇಳಿಕೆ ಕಂಡ ಬೆಳ್ಳಿ ದರ: ಕಿಲೋಗೆ ಬರೋಬ್ಬರಿ ₹5,000

ಕಳೆದ ಮೂರ್ನಾಲ್ಕು ದಿನಗಳಿಂದ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಾಣದೆ ತಟಸ್ಥವಾಗಿದ್ದ ಬೆಳ್ಳಿಯ ದರದಲ್ಲಿ ಇಂದು ಭಾರಿ ಕುಸಿತ ದಾಖಲಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಒಂದೇ ದಿನ ಪ್ರತಿ ಕಿಲೋ ಬೆಳ್ಳಿಗೆ ಬರೋಬ್ಬರಿ ₹5,000 ನಷ್ಟು ಭಾರಿ ಇಳಿಕೆಯಾಗಿದೆ ಇದರೊಂದಿಗೆ ಪ್ರಸ್ತುತ ಒಂದು ಕಿಲೋ ಬೆಳ್ಳಿಯ ಬೆಲೆ ₹2,85,000 ಕ್ಕೆ ಬಂದು ತಲುಪಿದೆ. (ಪ್ರತಿ ಗ್ರಾಂ ಬೆಳ್ಳಿಯ ದರ ₹285).

ಇಂದಿನ ಪ್ರಮುಖ ನಗರಗಳ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂಗೆ)

ನಗರ 24 ಕ್ಯಾರೆಟ್ ಚಿನ್ನದ ದರ

ಚೆನ್ನೈ ₹15,797

ಮುಂಬೈ ₹15,611

ದೆಹಲಿ ₹15,626

ಕೋಲ್ಕತ್ತಾ ₹15,611

ಬೆಂಗಳೂರು ₹15,611

ಹೈದರಾಬಾದ್ ₹15,611

ಕೇರಳ ₹15,611

ಪುಣೆ ₹15,611

ವಡೋದರಾ ₹15,616

ಅಹಮದಾಬಾದ್ ₹15,616

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular