HomeBusinessಚಿನ್ನ ಖರೀದಿದಾರರಿಗೆ ಬಂಪರ್ ಸಿಹಿಸುದ್ದಿ :8 ತಿಂಗಳಲ್ಲೇ ಅತಿ ಕಡಿಮೆ ದರಕ್ಕೆ ಚಿನ್ನ, ₹1.28 ಲಕ್ಷಕ್ಕೆ...

ಚಿನ್ನ ಖರೀದಿದಾರರಿಗೆ ಬಂಪರ್ ಸಿಹಿಸುದ್ದಿ :8 ತಿಂಗಳಲ್ಲೇ ಅತಿ ಕಡಿಮೆ ದರಕ್ಕೆ ಚಿನ್ನ, ₹1.28 ಲಕ್ಷಕ್ಕೆ ಇಳಿದ ಬೆಲೆ :ಬೆಳ್ಳಿ ಕೆಜಿಗೆ ₹2.35 ಲಕ್ಷಕ್ಕೆ ಇಳಿಕೆ

ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಮಾರುಕಟ್ಟೆ ಈಗ ಗ್ರಾಹಕರಿಗೆ ದೊಡ್ಡ ನಿರಾಳ ತಂದಿದೆ. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಇಂದು (ಗುರುವಾರ) ಬೆಳಿಗ್ಗೆ 10 ಗಂಟೆಯ ನಂತರ ಅಕ್ಷರಶಃ ಪಾತಾಳಕ್ಕೆ ಮುಖ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ (Spot Gold) ಬೆಲೆಯು ಪ್ರತಿ ಔನ್ಸ್‌ಗೆ $4,000 ಗಡಿಯಿಂದ ಕೆಳಕ್ಕೆ ಇಳಿದಿದ್ದು, ಬರೋಬ್ಬರಿ 7 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ

ಜಾಗತಿಕ ಮಾರುಕಟ್ಟೆಯ ಈ ಭಾರಿ ಪತನಕ್ಕೆ ಪೂರಕವಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಗಣನೀಯವಾಗಿ ಇಳಿಕೆಯಾಗಿದ್ದು, ಆಭರಣ ಪ್ರಿಯರಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣಗಳೇನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

🇺🇸 ಯುಎಸ್ ಫೆಡ್ ಬಡ್ಡಿ ದರ ಹೆಚ್ಚಳದ ಭೀತಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಹಣದುಬ್ಬರ (Inflation) ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸಲು ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಯುಎಸ್ ಫೆಡರಲ್ ರಿಸರ್ವ್ (US Fed) ಮುಂಬರುವ ಸೆಪ್ಟೆಂಬರ್‌ನಲ್ಲಿ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ಅಂದಾಜುಗಳು ಬಲವಾಗಿವೆ. ಬಡ್ಡಿದರ ಹೆಚ್ಚಳದ ಭೀತಿಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂಪಡೆಯುತ್ತಿದ್ದಾರೆ.

ಜಾಗತಿಕ ಉದ್ವಿಗ್ನತೆ ಶಮನ: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಳ್ಳುತ್ತಿದ್ದು, ಸುರಕ್ಷಿತ ಹೂಡಿಕೆಯಾಗಿದ್ದ ಚಿನ್ನದ ಮೇಲಿನ ಒತ್ತಡ ಕಡಿಮೆಯಾಗಿದೆ.

ಬೆಂಗಳೂರಲ್ಲಿ ಇಂದಿನ ಚಿನ್ನದ ಪರಿಷ್ಕೃತ ದರ (10 ಗ್ರಾಂಗೆ)

ಭಾರತದಲ್ಲಿ ಜೂನ್ 25 ರ ಗುರುವಾರದಂದು ಬೆಳಿಗ್ಗೆಯಿಂದಲೇ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದ್ದು, 2025 ರ ನವೆಂಬರ್ ನಂತರದ ಅತಿ ಕಡಿಮೆ ಮಟ್ಟಕ್ಕೆ ಕುಸಿದಿದೆ.

22 ಕ್ಯಾರೆಟ್ ಆಭರಣ ಚಿನ್ನ: ಬುಧವಾರ ಒಂದೇ ದಿನ ₹3,100 ಇಳಿಕೆ ಕಂಡಿದ್ದ 22 ಕ್ಯಾರೆಟ್ ಚಿನ್ನದ ದರ, ಗುರುವಾರ ಬೆಳಿಗ್ಗೆ 10 ಗಂಟೆಯ ನಂತರ ಏಕಕಾಲಕ್ಕೆ ₹3,850 ರಷ್ಟು ಭಾರಿ ಪತನಗೊಂಡಿದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,28,450 ಕ್ಕೆ ಕುಸಿದಿದೆ.

24 ಕ್ಯಾರೆಟ್ ಅಪರಂಜಿ ಚಿನ್ನ (ಶುದ್ಧ ಚಿನ್ನ): ಶುದ್ಧ ಚಿನ್ನದ ಬೆಲೆಯೂ ಸಹ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಸದ್ಯ 10 ಗ್ರಾಂಗೆ ₹1,40,130 ರ ಮಟ್ಟಕ್ಕೆ ಇಳಿದಿದೆ.

18 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹1,05,105 ಕ್ಕೆ ಇಳಿಕೆಯಾಗಿದೆ.

ಬೆಳ್ಳಿ ಬೆಲೆಯಲ್ಲಿ ಒಟ್ಟು ₹20,000 ರ ಭಾರಿ ರಿಯಾಯಿತಿ

ಚಿನ್ನಕ್ಕಿಂತಲೂ ವೇಗವಾಗಿ ಬೆಳ್ಳಿ ದರ ಪಾತಾಳಕ್ಕೆ ಮುಖ ಮಾಡಿದೆ. ಬುಧವಾರ ಮತ್ತು ಗುರುವಾರ ಬೆಳಗಿನ ಅವಧಿಯಲ್ಲಿ ಕಿಲೋ ಬೆಳ್ಳಿಗೆ ಒಟ್ಟು ₹10,000 ಇಳಿಕೆಯಾಗಿ ₹2.40 ಲಕ್ಷಕ್ಕೆ ತಲುಪಿತ್ತು. ಆದರೆ, ಬೆಳಿಗ್ಗೆ 10 ಗಂಟೆಯ ನಂತರ ಮಾರುಕಟ್ಟೆಯಲ್ಲಾದ ದಿಢೀರ್ ಬದಲಾವಣೆಯಿಂದಾಗಿ ಮತ್ತೆ ₹10,000 ರಷ್ಟು ಭಾರಿ ಕುಸಿತ ಕಂಡುಬಂದಿದೆ. ಇದರೊಂದಿಗೆ ಒಟ್ಟಾರೆಯಾಗಿ ಬೆಳ್ಳಿ ಬೆಲೆ ಕಿಲೋಗೆ ₹2,30,000 ಕ್ಕೆ (₹2.30 ಲಕ್ಷ) ಪತನಗೊಂಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular