ಬೆಂಗಳೂರು: ನೀವು ಬಂಗಾರ ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಕಳೆದ ಎರಡು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಚಿನ್ನದ ಬೆಲೆ ಇಂದು ಶುಕ್ರವಾರ (ಏಪ್ರಿಲ್ 24, 2026) ಸಹ ಮತ್ತಷ್ಟು ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿದಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ.
ಬೆಲೆ ಇಳಿಕೆಗೆ ಕಾರಣವೇನು?
ಇರಾನ್ ಮತ್ತು ಅಮೆರಿಕಾ ನಡುವಿನ ಬಿಕ್ಕಟ್ಟು ಇನ್ನು ಸುಧಾರಿಸದಿರುವುದು ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಕಮೋಡಿಟಿ ಮಾರುಕಟ್ಟೆಯ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ. ಇದರ ನೇರ ಹೊಡೆತ ಚಿನ್ನ ಮತ್ತು ಬೆಳ್ಳಿಯಂತಹ ಬೆಲೆಬಾಳುವ ಲೋಹಗಳ ಮೇಲೆ ಬಿದ್ದಿದ್ದು, ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.
ಇಂದಿನ ಚಿನ್ನದ ದರ ಎಷ್ಟು?
ಇಂದು ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು 55 ರೂಪಾಯಿ ಕುಸಿತ ಕಂಡಿದೆ.
ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಅಂದಾಜು ಬೆಲೆ ಪಟ್ಟಿ ಇಲ್ಲಿದೆ:
ಚಿನ್ನದ ವಿಧ (10 ಗ್ರಾಮ್)ಇಂದಿನ ದರ (ರೂ.)
22 ಕ್ಯಾರೆಟ್ (ಆಭರಣ ಚಿನ್ನ)1,40,200 ರೂ.
24 ಕ್ಯಾರೆಟ್ (ಅಪರಂಜಿ ಚಿನ್ನ)1,52,950 ರೂ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,52,950
ನಾಗ್ಪುರ ₹1,52,950
ಮುಂಬೈ ₹1,52,950
ಚೆನ್ನೈ ₹1,53,820
ಕೋಲ್ಕತ್ತಾ ₹1,52,950
ಪಾಟ್ನಾ ₹1,53,000
ಸೂರತ್ ₹1,53,000
ಚಂಡೀಗಢ ₹1,53,100
ಲಕ್ನೋ ₹1,53,100
ಬೆಳ್ಳಿ ಬೆಲೆ ಹೇಗಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿದೆ. ಆದರೆ ತಮಿಳುನಾಡು ಮತ್ತು ಕೇರಳದಂತಹ ನೆರೆ ರಾಜ್ಯಗಳಲ್ಲಿ ಬೆಳ್ಳಿ ಬೆಲೆ ಗ್ರಾಮ್‌ಗೆ 5 ರೂಪಾಯಿಯಷ್ಟು ಇಳಿಕೆಯಾಗಿದೆ.ಪ್ರತಿ ಗ್ರಾಂ ಚಿನ್ನದ ಬೆಲೆ 260 ದಾಖಲಿಸಿದೆ.

