ಬೆಂಗಳೂರು: ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೇಳಿದರೆ ಬಂಗಾರ ಪ್ರಿಯರ ಮುಖ ಬಾಡುವುದು ಖಂಡಿತ ಶಿವರಾತ್ರಿ ಹಬ್ಬದ ನಂತರ ಸ್ಥಿರತೆ ಕಂಡಿದ್ದ ಚಿನ್ನದ ದರ, ಇನ್ನೇನು ಇಳಿಕೆಯಾಗಿ ಮಧ್ಯಮ ವರ್ಗದವರ ಕೈಗೆಟಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಂದು ಆ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ. ಬೆಲೆ ಇಳಿಕೆಯಾಗುವ ಬದಲು ದಿಢೀರ್ ಏರಿಕೆಯ ಹಾದಿ ಹಿಡಿದಿದ್ದು, ಆಭರಣ ಖರೀದಿಗೆ ಪ್ಲಾನ್ ಮಾಡಿದ್ದವರಿಗೆ ದೊಡ್ಡ ಶಾಕ್ ನೀಡಿದೆ. ಹಾಗಾದರೆ ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟು ಏರಿದೆ? ಗ್ರಾಹಕರ ಜೇಬಿಗೆ ಎಷ್ಟು ಕತ್ತರಿ ಬೀಳಲಿದೆ?
ಕೆಲವು ದಿನಗಳ ಕಾಲ ಸತತವಾಗಿ ಇಳಿಕೆ ಕಂಡಿದ್ದರಿಂದ ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಿದ್ದ ಗ್ರಾಹಕರಿಗೆ ಇಂದಿನ ದಿಢೀರ್ ಏರಿಕೆ ನಿರಾಸೆ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ಬೆಲೆಬಾಳುವ ಲೋಹಗಳ ಬೇಡಿಕೆ ಹೆಚ್ಚಾಗಿರುವುದು ಈ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಶುದ್ಧ ಚಿನ್ನದ (24 ಕ್ಯಾರೆಟ್) ಇಂದಿನ ದರ:
ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 2,290 ರೂಪಾಯಿ ಏರಿಕೆಯಾಗಿದೆ.
1 ಗ್ರಾಂ ಬೆಲೆ: ₹15,649 (ನಿನ್ನೆ ₹15,420 ಇತ್ತು).
10 ಗ್ರಾಂ ಬೆಲೆ: ₹1,56,490 (ನಿನ್ನೆ ₹1,54,200 ಇತ್ತು).
100 ಗ್ರಾಂ ಬೆಲೆ: ₹15,64,900 (ನಿನ್ನೆಗಿಂತ ₹22,900 ಏರಿಕೆ).
22 ಕ್ಯಾರೆಟ್ ಚಿನ್ನದ ದರ:
ಆಭರಣ ಚಿನ್ನದ ಬೆಲೆಯಲ್ಲೂ ಗಣನೀಯ ಏರಿಕೆ ದಾಖಲಾಗಿದೆ.
1 ಗ್ರಾಂ ಬೆಲೆ: ₹210 ಹೆಚ್ಚಳವಾಗುವ ಮೂಲಕ ₹14,345 ತಲುಪಿದೆ.
10 ಗ್ರಾಂ ಬೆಲೆ: ₹2,100 ಏರಿಕೆಯೊಂದಿಗೆ ₹1,43,450 ದಾಖಲಾಗಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಸ್ಫೋಟ:
ಚಿನ್ನಕ್ಕಿಂತಲೂ ಮಿಗಿಲಾಗಿ ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಕೆಜಿಗೆ ಏರಿಕೆ: ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಕೆಜಿಗೆ ₹15,000 ಹೆಚ್ಚಳವಾಗಿದೆ.
ಇಂದಿನ ದರ: ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2,70,000 ರೂಪಾಯಿಗಳಿಗೆ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರೆಟ್ (24K) ಶುದ್ಧ ಚಿನ್ನದ ಬೆಲೆ ಪಟ್ಟಿ ಇಲ್ಲಿದೆ:
ನಗರ 24 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
ಚೆನ್ನೈ ₹15,818
ದೆಹಲಿ ₹15,664
ಬೆಂಗಳೂರು ₹15,649
ಮುಂಬೈ ₹15,649
ಕೋಲ್ಕತ್ತಾ ₹15,649
ಹೈದರಾಬಾದ್ ₹15,649
ಕೇರಳ ₹15,649
ಪುಣೆ ₹15,649
ಅಹಮದಾಬಾದ್ ₹15,649
ವಡೋದರಾ ₹15,649

