ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆಯಾಗಿದೆ. ಶುಕ್ರವಾರವೂ ಚಿನ್ನದ ದರ ಹೆಚ್ಚಳವಾಗಿದ್ದು, ಸತತ ಎರಡನೇ ದಿನ ಹಳದಿ ಲೋಹ ದುಬಾರಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ, ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಹಣದುಬ್ಬರದ ಆತಂಕ ಚಿನ್ನದ ದರದ ಮೇಲೂ ಪರಿಣಾಮ ಬೀರಿದೆ.
ಗುರುವಾರ ಚಿನ್ನದ ಬೆಲೆ ₹305ರಷ್ಟು ಏರಿಕೆಯಾಗಿತ್ತು. ಶುಕ್ರವಾರವೂ 10 ಗ್ರಾಂ ಚಿನ್ನದ ದರದಲ್ಲಿ ₹120ರಷ್ಟು ಹೆಚ್ಚಳವಾಗಿದೆ. ಇತ್ತ, ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಗುರುವಾರ ಬೆಳ್ಳಿ ಕೆಜಿಗೆ ₹5,000ರಷ್ಟು ಏರಿಕೆಯಾಗಿತ್ತು.
ಸೆಪ್ಟೆಂಬರ್ 4ರಂದು ಚಿನ್ನದ ಬೆಲೆ
24 ಕ್ಯಾರಟ್ ಚಿನ್ನ: 1 ಗ್ರಾಂಗೆ ₹15,666
22 ಕ್ಯಾರಟ್ ಚಿನ್ನ: 1 ಗ್ರಾಂಗೆ ₹14,360
18 ಕ್ಯಾರಟ್ ಚಿನ್ನ: 1 ಗ್ರಾಂಗೆ ₹11,749
22 ಕ್ಯಾರಟ್ ಚಿನ್ನ: 10 ಗ್ರಾಂಗೆ ₹1,43,600
24 ಕ್ಯಾರಟ್ ಚಿನ್ನ: 10 ಗ್ರಾಂಗೆ ₹1,56,660
ಬೆಳ್ಳಿ ದರ
1 ಗ್ರಾಂ ಬೆಳ್ಳಿ: ₹250
100 ಗ್ರಾಂ ಬೆಳ್ಳಿ: ₹25,000
ಬೆಂಗಳೂರಿನಲ್ಲೂ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,43,600ರಷ್ಟಿದ್ದು, 100 ಗ್ರಾಂ ಬೆಳ್ಳಿ ₹25,000ರಲ್ಲಿ ಇದೆ. ತಮಿಳುನಾಡು ಮತ್ತು ಕೇರಳದ ಕೆಲವು ಮಾರುಕಟ್ಟೆಗಳಲ್ಲಿ ಬೆಳ್ಳಿ ದರ ₹25,500ರ ಆಸುಪಾಸಿನಲ್ಲಿದೆ.ಚಿನ್ನ ಮತ್ತು ಬೆಳ್ಳಿ ದರಗಳು ದಿನದಿಂದ ದಿನಕ್ಕೆ ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಗೂ ಮುನ್ನ ಸ್ಥಳೀಯ ಆಭರಣ ಮಳಿಗೆಯಲ್ಲಿ ಇಂದಿನ ದರವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,56,660
ನಾಗ್ಪುರ ₹1,56,660
ಮುಂಬೈ ₹1,56,660
ಚೆನ್ನೈ ₹1,56,660
ಕೋಲ್ಕತ್ತಾ ₹1,56,660
ಪಾಟ್ನಾ ₹1,56,710
ಸೂರತ್ ₹1,56,710
ಚಂಡೀಗಢ ₹1,56,810
ಲಕ್ನೋ ₹1,56,810

