ಬೆಂಗಳೂರು: ಬಂಗಾರ ಖರೀದಿಸಲು ಪ್ಲಾನ್ ಮಾಡುತ್ತಿರುವವರಿಗೆ ಇಂದೊಂದು ಸಮಾಧಾನಕರ ಸುದ್ದಿ. ಕಳೆದ ಕೆಲವು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ಬೆಲೆ ಇಂದು ತುಸು ಸಮಾಧಾನ ತಂದಿದೆ. ಆದರೆ, ಇದೇ ಸಮಯದಲ್ಲಿ ಬೆಳ್ಳಿ ಬೆಲೆ ಮಾತ್ರ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ್ದು, ಒಂದೇ ದಿನ ಪ್ರತಿ ಕೆಜಿಗೆ ಬರೋಬ್ಬರಿ ₹5,000 ಏರಿಕೆಯಾಗಿದೆ! ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ದೇಶೀಯ ಬೆಲೆಗಳ ಮೇಲೆ ಭಾರಿ ಪ್ರಭಾವ ಬೀರುತ್ತಿವೆ.
ಚಿನ್ನ ಸ್ಥಿರ, ಬೆಳ್ಳಿ ಯಾಕೆ ಏರಿಕೆ?
ಏಪ್ರಿಲ್ 25ರ ವರದಿಯ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ 75 ಡಾಲರ್ ಗಡಿ ದಾಟಿರುವುದರಿಂದ ದೇಶಿಯವಾಗಿಯೂ ಬೆಳ್ಳಿ ದರ ಗಗನಕ್ಕೇರಿದೆ. ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 4,710 ಡಾಲರ್ ಹತ್ತಿರ ವಹಿವಾಟು ನಡೆಸುತ್ತಿದೆ.
ತೈಲ ಬೆಲೆ ಏರಿಕೆ ಮತ್ತು ಚಿನ್ನದ ಕನೆಕ್ಷನ್:
ಪಶ್ಚಿಮ ಏಷ್ಯಾದಲ್ಲಿ ಇರಾನ್ ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಇನ್ನು ತಣ್ಣಗಾಗಿಲ್ಲ. ಈ ಅನಿಶ್ಚಿತತೆಯ ನಡುವೆ ಕಚ್ಚಾ ತೈಲ (Crude Oil) ಬೆಲೆ ಪ್ರತಿ ಬ್ಯಾರೆಲ್‌ಗೆ 105 ಡಾಲರ್ ತಲುಪಿದೆ. ಹೂಡಿಕೆದಾರರು ಈಗ ಚಿನ್ನಕ್ಕಿಂತ ಹೆಚ್ಚಾಗಿ ತೈಲ ಮಾರುಕಟ್ಟೆಯತ್ತ ಗಮನ ಹರಿಸುತ್ತಿರುವುದು ಬಂಗಾರದ ಬೆಲೆ ಸ್ಥಿರವಾಗಿರಲು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ 24 ಕ್ಯಾರಟ್ ಚಿನ್ನದ ದರ (ಇಂದಿನ ದರ)
ಚೆನ್ನೈ – ₹15,491
ಮುಂಬೈ – ₹15,404
ದೆಹಲಿ – ₹15,419
ಕೋಲ್ಕತ್ತಾ – ₹15,404
ಬೆಂಗಳೂರು – ₹15,404
ಹೈದರಾಬಾದ್ – ₹15,404
ಕೇರಳ – ₹15,404
ಪುಣೆ – ₹15,404
ವಡೋದರಾ – ₹15,409
ಅಹಮದಾಬಾದ್ – ₹15,409

