ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಹಾದಿಯಲ್ಲೇ ಮುಂದುವರಿದಿದ್ದು, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ದಿನವೂ ಬಂಗಾರದ ದರ ಹೆಚ್ಚಳವಾಗಿದೆ.
ಮತ್ತೊಂದೆಡೆ, ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ಫ್ಯೂಚರ್ಸ್ ಮಾರುಕಟ್ಟೆಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ₹165 (0.11%) ಏರಿಕೆಯಾಗಿ, ಬೆಳಗಿನ ಅವಧಿಯಲ್ಲಿ ₹1,51,985 ರಂತೆ ವಹಿವಾಟು ನಡೆಸಿದೆ. ಹಿಂದಿನ ದಿನದ ವ್ಯಾಪಾರದ ಅಂತ್ಯಕ್ಕೆ ಈ ದರ ₹1,51,820 ರಷ್ಟಿತ್ತು.
ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರಸ್ತುತ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಗ್ರಾಂಗೆ ₹100 ಏರಿಕೆಯಾಗಿದ್ದು, ₹13,965 ಕ್ಕೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಗ್ರಾಂಗೆ ₹109 ಹೆಚ್ಚಾಗಿದ್ದು, ಬರೋಬ್ಬರಿ ₹15,235 ರಂತೆ ಮಾರಾಟವಾಗುತ್ತಿದೆ
22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಇಂದಿನ ದರ ಪಟ್ಟಿ:
22 ಕ್ಯಾರೆಟ್ ಚಿನ್ನ (ಆಭರಣ ಬಂಗಾರ):
1 ಗ್ರಾಂ: ₹13,965 (+₹100)
8 ಗ್ರಾಂ: ₹1,11,720
10 ಗ್ರಾಂ: ₹1,39,650
100 ಗ್ರಾಂ: ₹13,96,500
24 ಕ್ಯಾರೆಟ್ ಚಿನ್ನ (ಅಪರಂಜಿ ಬಂಗಾರ):
1 ಗ್ರಾಂ: ₹15,235 (+₹109)
8 ಗ್ರಾಂ: ₹1,21,880
10 ಗ್ರಾಂ: ₹1,52,350
100 ಗ್ರಾಂ: ₹15,23,500
ಬೆಳ್ಳಿ ದರ
ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 245 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,450 ರುಪಾಯಿ ಹಾಗೂ 1 ಕೆಜಿಗೆ 2,45,000 ರುಪಾಯಿ ಇದೆ.

