ಹೊಸದಿಲ್ಲಿ: ದೇಶದಲ್ಲಿ ಸಾಲು ಸಾಲು ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆಯೇ ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಏರಿಕೆ ಶಾಕ್ ನೀಡಿದೆ. ಜುಲೈ ತಿಂಗಳಿನಲ್ಲಿ ತುಸು ಇಳಿಕೆ ಕಂಡಿದ್ದ ಬಂಗಾರದ ದರ, ಇದೀಗ ದಿಢೀರ್ ಏರಿಕೆ ಕಾಣುತ್ತಿದ್ದು ಕೇವಲ ಕಳೆದ ಮೂರು ದಿನಗಳಲ್ಲಿಯೇ ಬರೋಬ್ಬರಿ ₹5,890 ಯಷ್ಟು ಹೆಚ್ಚಳವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಶುಕ್ರವಾರ (ಆಗಸ್ಟ್ 7, 2026) ಬಂಗಾರದ ಬೆಲೆ ಮತ್ತಷ್ಟು ಏರಿಕೆಯತ್ತ ಮುಖ ಮಾಡಿದ್ದು, ಆಭರಣ ಖರೀದಿದಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಬೆಳ್ಳಿ ಬೆಲೆಯಲ್ಲಿ ಸ್ಥಿರತೆ:
ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದರೂ, ಬೆಳ್ಳಿ ದರದಲ್ಲಿ ಮಾತ್ರ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಬೆಳ್ಳಿ ಬೆಲೆ ತಟಸ್ಥವಾಗಿದ್ದು, ಪ್ರಸ್ತುತ 1 ಗ್ರಾಂ ಬೆಳ್ಳಿಯ ಬೆಲೆ ₹240 ಹಾಗೂ 1 ಕೆಜಿ ಬೆಳ್ಳಿಯ ದರ ₹2,40,000 ದಾಖಲಾಗಿದೆ.
ಇಂದಿನ ಚಿನ್ನದ ದರ ಪಟ್ಟಿ (ಆಗಸ್ಟ್ 7, 2026):
24K ಅಪರಂಜಿ ಚಿನ್ನ: ಗ್ರಾಂಗೆ ₹14,989 (₹16 ಏರಿಕೆ) 10 ಗ್ರಾಂಗೆ ₹1,49,890
22K ಆಭರಣ ಚಿನ್ನ: ಗ್ರಾಂಗೆ ₹13,740 (₹15 ಏರಿಕೆ) 10 ಗ್ರಾಂಗೆ ₹1,37,400
18K ಚಿನ್ನ: ಗ್ರಾಂಗೆ ₹11,242 (₹12 ಏರಿಕೆ) 10 ಗ್ರಾಂಗೆ ₹1,12,420
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,49,890
ನಾಗ್ಪುರ ₹1,49,890
ಮುಂಬೈ ₹1,49,890
ಚೆನ್ನೈ ₹1,50,000
ಕೋಲ್ಕತ್ತಾ ₹1,49,890
ಪಾಟ್ನಾ ₹1,49,940
ಸೂರತ್ ₹1,49,940
ಚಂಡೀಗಢ ₹1,50,004
ಲಕ್ನೋ ₹1,50,004

