ಬೆಂಗಳೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಅನಿಶ್ಚಿತತೆ ಹಾಗೂ ಅಮೆರಿಕ-ವೆನೆಜುವೆಲಾ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷದ ಕರಿನೆರಳು ನೇರವಾಗಿ ಚಿನ್ನದ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ, ಹಳದಿ ಲೋಹದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಮಂಗಳವಾರವೂ ಬರೋಬ್ಬರಿ 600 ರೂಪಾಯಿಗಳಷ್ಟು ಏರಿಕೆ ಕಂಡಿದೆ.ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಾಣುತ್ತಿವೆ. ಸೋಮವಾರ ಪ್ರತಿ ಗ್ರಾಂ ಚಿನ್ನಕ್ಕೆ 145 ರೂ. ಏರಿಕೆಯಾಗಿದ್ದರೆ, ಮಂಗಳವಾರ ಮತ್ತೆ 130 ರೂ. ಹೆಚ್ಚಳವಾಗಿದೆ. ಅಂದರೆ, ಕೇವಲ 48 ಗಂಟೆಗಳ ಅವಧಿಯಲ್ಲಿ ಚಿನ್ನದ ಬೆಲೆ 275 ರೂ.ಗಳಷ್ಟು ದುಬಾರಿಯಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಏರುಗತಿಯಲ್ಲಿದೆ.
ಇಂದಿನ ಮಾರುಕಟ್ಟೆ ದರ ಪಟ್ಟಿ:ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ವಿವರ ಇಲ್ಲಿದೆ:
22 ಕ್ಯಾರಟ್ ಚಿನ್ನ10 ಗ್ರಾಂ₹ 1,27,250
24 ಕ್ಯಾರಟ್ ಚಿನ್ನ10 ಗ್ರಾಂ₹ 1,38,820
ಬೆಳ್ಳಿ100 ಗ್ರಾಂ₹ 25,300
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ (ಅಪರಂಜಿ) ಚಿನ್ನ: ₹ 13,882 (1 ಗ್ರಾಂ)
22 ಕ್ಯಾರಟ್ (ಆಭರಣ) ಚಿನ್ನ: ₹ 12,725 (1 ಗ್ರಾಂ)
ಬೆಳ್ಳಿ: ₹ 253 (1 ಗ್ರಾಂ)
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ 1 ಗ್ರಾಂಗೆ)
ನಗರ 22 ಕ್ಯಾರಟ್ ಚಿನ್ನ (1 ಗ್ರಾಂ)
ಚೆನ್ನೈ ₹ 12,830 (ಅತಿ ಹೆಚ್ಚು)
ದೆಹಲಿ, ಜೈಪುರ್, ಲಕ್ನೋ ₹ 12,740
ಅಹ್ಮದಾಬಾದ್ ₹ 12,730
ಬೆಂಗಳೂರು, ಮುಂಬೈ, ಕೋಲ್ಕತಾ ₹ 12,725
ಕೇರಳ, ಭುವನೇಶ್ವರ್ ₹ 12,725

