ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರವೂ ಇಳಿಕೆಯಾಗಿದೆ. ವಾರಾಂತ್ಯದಲ್ಲಿ ₹170ರಷ್ಟು ಕಡಿಮೆಯಾಗಿದ್ದ ಬಂಗಾರದ ದರ, ಇಂದು ಮತ್ತಷ್ಟು ₹60 ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,41,300 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ದರ ₹1,54,150 ಇದೆ. ಬೆಂಗಳೂರಿನಲ್ಲೂ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,41,300ರಷ್ಟಿದೆ.
ಇನ್ನು ಬೆಳ್ಳಿ ಬೆಲೆಯಲ್ಲಿ ಸೋಮವಾರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ₹25,000ರಷ್ಟಿದೆ. ಬೆಂಗಳೂರಿನಲ್ಲೂ 100 ಗ್ರಾಂ ಬೆಳ್ಳಿಗೆ ₹25,000 ದರ ಇದೆ. ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ ಸುಮಾರು ₹25,500ರಷ್ಟಿದೆ.
ಕಳೆದ ಕೆಲವು ವಹಿವಾಟು ಅವಧಿಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬರುತ್ತಿದ್ದು, ಇತ್ತೀಚಿನ ಏರಿಕೆಯ ನಂತರ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ದೇಶೀಯ ಬೇಡಿಕೆ ಚಿನ್ನದ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಸೆಪ್ಟೆಂಬರ್ 7ರಂದು ಭಾರತದಲ್ಲಿ ಚಿನ್ನ, ಬೆಳ್ಳಿ ದರ
24 ಕ್ಯಾರಟ್ ಚಿನ್ನ: 1 ಗ್ರಾಂಗೆ ₹15,415
22 ಕ್ಯಾರಟ್ ಚಿನ್ನ: 1 ಗ್ರಾಂಗೆ ₹14,130
18 ಕ್ಯಾರಟ್ ಚಿನ್ನ: 1 ಗ್ರಾಂಗೆ ₹11,561
ಬೆಳ್ಳಿ: 1 ಗ್ರಾಂಗೆ ₹250
22 ಕ್ಯಾರಟ್ ಚಿನ್ನ: 10 ಗ್ರಾಂಗೆ ₹1,41,300
24 ಕ್ಯಾರಟ್ ಚಿನ್ನ: 10 ಗ್ರಾಂಗೆ ₹1,54,150
ಬೆಳ್ಳಿ: 100 ಗ್ರಾಂಗೆ ₹25,000
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,56,660
ನಾಗ್ಪುರ ₹1,56,660
ಮುಂಬೈ ₹1,56,660
ಚೆನ್ನೈ ₹1,56,660
ಕೋಲ್ಕತ್ತಾ ₹1,56,660
ಪಾಟ್ನಾ ₹1,56,710
ಸೂರತ್ ₹1,56,710
ಚಂಡೀಗಢ ₹1,56,810
ಲಕ್ನೋ ₹1,56,810

