ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಸೋಮವಾರ (ಆಗಸ್ಟ್ 31) ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ದಾಖಲೆಯ ಗರಿಷ್ಠ ಮಟ್ಟದಿಂದ ಬೆಲೆ ಸತತವಾಗಿ ಕುಸಿಯುತ್ತಿದೆ. ವಾರಾಂತ್ಯದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಳಿತ ಕಂಡುಬಂದರೂ, ಇಂದು ಬೆಳಗ್ಗೆ ದರಗಳು ದಿಢೀರ್ ಕುಸಿತ ಕಂಡಿರುವುದು ಚಿನ್ನಾಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಕೆಳಮುಖವಾಗಿ ಚಲಿಸುತ್ತಿರುವ ಬಂಗಾರದ ದರವನ್ನು ಕಂಡು ಅನೇಕರು ಖರೀದಿಗೆ ಮುಂದಾಗುತ್ತಿದ್ದಾರೆ.
ಆಗಸ್ಟ್ 31 ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಣನೀಯ ಕುಸಿತವಾಗಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ ಸುಮಾರು ₹1,887 ರಷ್ಟು ಮತ್ತು ಬೆಳ್ಳಿ ₹3,856 ರಷ್ಟು ಕಡಿಮೆಯಾಗಿದೆ. ಯುಎಸ್ ಬಾಂಡ್ ಇಳುವರಿ ಏರಿಕೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಸೆಪ್ಟೆಂಬರ್‌ನಲ್ಲಿ ಫೆಡರಲ್ ರಿಸರ್ವ್ ದರ ಏರಿಕೆಯ ಸಾಧ್ಯತೆಗಳು ಅಮೂಲ್ಯ ಲೋಹಗಳ ಬೆಲೆಗಳ ಮೇಲೆ ಒತ್ತಡ ಹೇರಿವೆ. ಆದಾಗ್ಯೂ, ದೀರ್ಘಾವಧಿಯ ಅಂದಾಜಿನ ಪ್ರಕಾರ, 2026 ರ ಅಂತ್ಯದ ವೇಳೆಗೆ ಚಿನ್ನ $5,600 ಮತ್ತು ಬೆಳ್ಳಿ $120 ತಲುಪಬಹುದು ಎಂದು ಮೊನಾರ್ಕ್ PMS ಊಹಿಸಿದೆ.
ಬೆಂಗಳೂರಿನಲ್ಲಿ ಇಂದಿನ ದರ ವಿವರ
ಬೆಂಗಳೂರಿನಲ್ಲೂ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ:
24 ಕ್ಯಾರೆಟ್ ಚಿನ್ನ (ಗ್ರಾಮ್‌ಗೆ): ₹147 ಇಳಿಕೆಯಾಗಿ ₹15,677 ನಿಗದಿಯಾಗಿದೆ.
22 ಕ್ಯಾರೆಟ್ ಚಿನ್ನ (ಗ್ರಾಮ್‌ಗೆ): ₹135 ಇಳಿಕೆಯಾಗಿ ₹14,370 ಆಗಿದೆ.
18 ಕ್ಯಾರೆಟ್ ಚಿನ್ನ (ಗ್ರಾಮ್‌ಗೆ): ₹83 ಇಳಿಕೆಯಾಗಿ ₹11,785 ನಿಗದಿಯಾಗಿದೆ.
ಬೆಳ್ಳಿ ದರವು ಪ್ರತಿ ಗ್ರಾಮ್‌ಗೆ ₹255 ರಷ್ಟಿದೆ. ಚಿನ್ನದ ದರದಲ್ಲಿನ ಈ ಇಳಿಕೆಯು ಹೂಡಿಕೆದಾರರು ಮತ್ತು ಗ್ರಾಹಕರಿಗೆ ಖರೀದಿಗೆ ಉತ್ತಮ ಅವಕಾಶ ಕಲ್ಪಿಸಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,56,770
ನಾಗ್ಪುರ ₹1,56,770
ಮುಂಬೈ ₹1,56,770
ಚೆನ್ನೈ ₹1,56,770
ಕೋಲ್ಕತ್ತಾ ₹1,56,770
ಪಾಟ್ನಾ ₹1,56,820
ಸೂರತ್ ₹1,56,820
ಚಂಡೀಗಢ ₹1,56,920
ಲಕ್ನೋ ₹1,56,920

