HomeBusinessಚಿನ್ನ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಸತತ 4ನೇ ದಿನವೂ ಕುಸಿದ ಚಿನ್ನದ ದರ ಬೆಳ್ಳಿ...

ಚಿನ್ನ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಸತತ 4ನೇ ದಿನವೂ ಕುಸಿದ ಚಿನ್ನದ ದರ ಬೆಳ್ಳಿ ಬೆಲೆಯಲ್ಲಿ ₹10,000 ದಾಖಲೆ ಇಳಿಕೆ

ಚಿನ್ನದ ಮಾರುಕಟ್ಟೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ವೀಕೆಂಡ್‌ನಲ್ಲಿ ಭಾರೀ ಇಳಿಕೆ ಕಂಡಿದೆ. ಜಾಗತಿಕ ರಾಜಕೀಯ ವಿದ್ಯಮಾನಗಳ ನಡುವೆಯೂ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದಿಢೀರ್ ಕುಸಿದಿರುವುದು ಗ್ರಾಹಕರಲ್ಲಿ ಹರ್ಷ ತಂದಿದೆ.

ಇಂದಿನ ಚಿನ್ನದ ದರ ವಿವರ (ಮಾರ್ಚ್ 21, 2026)

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸುಮಾರು 3,000 ರೂಪಾಯಿಗಳಷ್ಟು ಇಳಿಕೆಯಾಗುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):

10 ಗ್ರಾಂ ಬೆಲೆ: ಇಂದು 2,940 ರೂ. ಇಳಿಕೆಯಾಗಿದ್ದು, 1,45,970 ರೂ. ಗೆ ತಲುಪಿದೆ.

1 ಗ್ರಾಂ ಬೆಲೆ: ಅಲ್ಪ ಏರಿಳಿತದ ನಡುವೆ 15,093 ರೂ. ದಾಖಲಾಗಿದೆ.

ಬೆಳ್ಳಿ ಬೆಲೆಯೂ ಅಗ್ಗ

ಬಂಗಾರದ ಬೆನ್ನಲ್ಲೇ ಬೆಳ್ಳಿ ಬೆಲೆಯೂ ನೆಲಕಚ್ಚಿದೆ. ಕೆಜಿ ಬೆಳ್ಳಿಯ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ 2.45 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ.

ಬೆಲೆ ಇಳಿಕೆಗೆ ಕಾರಣವೇನು?

ಜಾಗತಿಕ ಮಟ್ಟದಲ್ಲಿ ಇರಾನ್, ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಕವಿದಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಎಲ್‌ಪಿಜಿ ಕೊರತೆಯಂತಹ ಆರ್ಥಿಕ ಸವಾಲುಗಳ ನಡುವೆಯೂ, ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತವು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,45,970

ನಾಗ್ಪುರ ₹1,45,970

ಮುಂಬೈ ₹1,45,970

ಚೆನ್ನೈ ₹1,48,580

ಕೋಲ್ಕತ್ತಾ ₹1,45,970

ಪಾಟ್ನಾ ₹1,46,020

ಸೂರತ್‌ ₹1,46,020

ಚಂಡೀಗಢ ₹1,46,120

ಲಕ್ನೋ ₹1,46,120

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular