HomeBusinessಚಿನ್ನಪ್ರಿಯರಿಗೆ ಬಂಪರ್ ಲಾಟರಿ: ಚಿನ್ನದ ಬೆಲೆಯಲ್ಲಿ ₹9,050 ಇಳಿಕೆ: 3 ಲಕ್ಷಕ್ಕೆ ಕುಸಿದ ಬೆಳ್ಳಿ ...

ಚಿನ್ನಪ್ರಿಯರಿಗೆ ಬಂಪರ್ ಲಾಟರಿ: ಚಿನ್ನದ ಬೆಲೆಯಲ್ಲಿ ₹9,050 ಇಳಿಕೆ: 3 ಲಕ್ಷಕ್ಕೆ ಕುಸಿದ ಬೆಳ್ಳಿ ದರ ಇಳಿಕೆಗೆ ಅಸಲಿ ಕಾರಣವೇನು?

ಬೆಂಗಳೂರು: ಕಳೆದ ಕೆಲವು ವಾರಗಳಿಂದ ಆಕಾಶಕ್ಕೆ ಏಣಿಯಾಗಿದ್ದ ಚಿನ್ನದ ಬೆಲೆ ಈಗ ದಿಢೀರ್ ಆಗಿ ನೆಲಕ್ಕೆ ಉರುಳಿದೆ. ಸತತ ಮೂರು ದಿನಗಳಿಂದ ಅಚ್ಚರಿಯ ರೀತಿಯಲ್ಲಿ ಇಳಿಕೆ ಕಾಣುತ್ತಿರುವ ಚಿನ್ನದ ದರ ಇಂದು (ಸೋಮವಾರ) ಗ್ರಾಹಕರಿಗೆ ದೊಡ್ಡ ಸಮಾಧಾನ ತಂದಿದೆ. 18 ಸಾವಿರದ ಗಡಿಯಲ್ಲಿದ್ದ ಒಂದು ಗ್ರಾಂ ಚಿನ್ನದ ಬೆಲೆ ಈಗ ಹಳೆಯ ಮಟ್ಟಕ್ಕೆ ಮರಳಿದೆ.

ಇಂದಿನ ಲೇಟೆಸ್ಟ್ ದರ ಎಷ್ಟು?

ಫೆಬ್ರವರಿ 2, 2026ರ ಸೋಮವಾರದ ವರದಿ ಪ್ರಕಾರ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರೆಟ್ (ಅಪರಂಜಿ) ಚಿನ್ನ: 10 ಗ್ರಾಂಗೆ ಒಂದೇ ದಿನಕ್ಕೆ ಬರೋಬ್ಬರಿ ₹9,050 ಕಡಿತವಾಗಿದೆ.

1 ಗ್ರಾಂ ಬೆಲೆ: ₹15,153 ಕ್ಕೆ ಇಳಿಕೆಯಾಗಿದೆ.

10 ಗ್ರಾಂ ಬೆಲೆ: ₹1,51,530 ರಷ್ಟಿದೆ.

ಬೆಳ್ಳಿ ಬೆಲೆಯೂ ಡೌನ್
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಕೂಡ ಗ್ರಾಹಕರಿಗೆ ಖುಷಿ ನೀಡಿದೆ. ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಅಸ್ಥಿರತೆ ಮತ್ತು ಹೂಡಿಕೆದಾರರು ಲಾಭಕ್ಕಾಗಿ ಮಾರಾಟ ಶುರು ಮಾಡಿದ ಪರಿಣಾಮ ಒಂದು ಕೆಜಿ ಬೆಳ್ಳಿಯ ಬೆಲೆ ಈಗ ₹3 ಲಕ್ಷದ ಆಸುಪಾಸಿಗೆ ಇಳಿದಿದೆ.

ಬೆಳ್ಳಿ ಬೆಲೆ ಇಂದು 50 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ 300ರೂ ಆಗಿದ್ದು, ಕೆಜಿ ಬೆಲೆಯಲ್ಲಿ 50 ಸಾವಿರ ಇಳಿಕೆ ಆಗಿ, ಕೆಜಿಗೆ 3,00,000 ರೂಪಾಯಿ ಇದೆ,.

ಒಂದು ವರ್ಷದ ಇತಿಹಾಸ: ಏಕ್ ಧಮ್ ಡಬಲ್

ಚಿನ್ನದ ಬೆಲೆ ಎಷ್ಟು ವೇಗವಾಗಿ ಬೆಳೆದಿದೆ ಎಂದರೆ:

ನವೆಂಬರ್ 2024: 10 ಗ್ರಾಂಗೆ ₹75,650 ಇತ್ತು.

ಫೆಬ್ರವರಿ 2025: ₹88,090 ಕ್ಕೆ ಏರಿತ್ತು.

ಜನವರಿ 2026: ಒಂದೇ ವರ್ಷದಲ್ಲಿ ಬೆಲೆ ದುಪ್ಪಟ್ಟಾಗಿ ₹1,60,580 ತಲುಪಿತ್ತು.

ಮುಂದಿನ ದಿನಗಳಲ್ಲಿ ಇದು ₹2 ಲಕ್ಷ ದಾಟಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತಾದರೂ, ಈಗಿನ ಈ ಕುಸಿತವು ಮದುವೆ ಸೀಸನ್‌ನಲ್ಲಿರುವ ಪೋಷಕರಿಗೆ ದೊಡ್ಡ ರಿಲೀಫ್ ನೀಡಿದೆ.

24 ಕ್ಯಾರೆಟ್ ಚಿನ್ನ (ಅಪರಂಜಿ ಚಿನ್ನ)

ಶುದ್ಧ ಚಿನ್ನದ ಬೆಲೆಯಲ್ಲಿ ಇಂದು 10 ಗ್ರಾಂಗೆ ಬರೋಬ್ಬರಿ ₹9,050 ಇಳಿಕೆಯಾಗಿದೆ

1 ಗ್ರಾಂ: ₹15,153 (ನಿನ್ನೆ ₹16,058 ಇತ್ತು)

10 ಗ್ರಾಂ: ₹1,51,530 (ನಿನ್ನೆ ₹1,60,580 ಇತ್ತು)

100 ಗ್ರಾಂ: ₹15,15,300 (ಬರೋಬ್ಬರಿ ₹90,500 ಕಡಿತ

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ)
ಆಭರಣ ತಯಾರಿಸಲು ಬಳಸುವ ಚಿನ್ನದ ಬೆಲೆಯೂ ಸಹ ಇಂದು ಗ್ರಾಹಕರ ಜೇಬಿಗೆ ಹೊರೆಯಾಗದಂತೆ ತಗ್ಗಿದೆ.

1 ಗ್ರಾಂ: ₹13,890 (ನಿನ್ನೆ ₹14,720 ಇತ್ತು)

10 ಗ್ರಾಂ: ₹1,38,900 (ನಿನ್ನೆ ₹1,47,200 ಇತ್ತು)

100 ಗ್ರಾಂ: ₹13,89,000 (ಒಟ್ಟಾರೆ ₹83,000 ಇಳಿಕೆ)

ಇಂದಿನ ಪ್ರಮುಖ ದೇಶಗಳಲ್ಲಿ 24 ಕ್ಯಾರೆಟ್ ಚಿನ್ನದ ದರ

ಚೆನ್ನೈ ₹15,218

ಮುಂಬೈ ₹15,153

ದೆಹಲಿ ₹15,168

ಕೋಲ್ಕತ್ತಾ ₹15,153

ಬೆಂಗಳೂರು ₹15,153

ಹೈದರಾಬಾದ್ ₹15,153

ಕೇರಳ ₹15,153

ಪುಣೆ ₹15,153

ವಡೋದರಾ ₹15,158

ಅಹಮದಾಬಾದ್ ₹15,158

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular