ಯುದ್ಧದ ಭೀತಿ ನಡುವೆಯೂ ಬಂಗಾರ ಬೆಲೆ ಇಳಿಕೆಯಾಗಿರುವುದು ನಿಜಕ್ಕೂ ಅಚ್ಚರಿಯೇ ಸರಿ ಮದುವೆ ಸೀಸನ್ ಶುರುವಾಗುವ ಮುನ್ನವೇ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದ್ದರೂ, ಭಾರತದಲ್ಲಿ ಮಾತ್ರ ಬಂಗಾರ ಇಂದು ಅಗ್ಗವಾಗಿದೆ.ಯುದ್ಧದ ಭೀತಿಯ ನಡುವೆಯೂ ಬೆಲೆ ತಗ್ಗುತ್ತಿರುವುದು ಹೂಡಿಕೆದಾರರಿಗೆ ವರದಾನವಾಗಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ ಕಂಡಿದೆ.ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನ-ಬೆಳ್ಳಿಯತ್ತ ಮುಖ ಮಾಡುತ್ತಿದ್ದಾರೆ.ಬೆಳ್ಳಿ ದರ ಕೂಡ ಇಳಿಕೆ ಕಂಡಿದ್ದು, ಸದ್ಯ 3 ಲಕ್ಷ ರೂಪಾಯಿಯ ಆಸುಪಾಸಿನಲ್ಲಿದೆ.
ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ ವಿವರ (ಮಾರ್ಚ್ 03):
1 ಗ್ರಾಂ ಚಿನ್ನ: ₹17,002 (ನಿನ್ನೆಗಿಂತ ₹49 ಇಳಿಕೆ)
8 ಗ್ರಾಂ ಚಿನ್ನ: ₹1,36,016 (ನಿನ್ನೆಗಿಂತ ₹392 ಇಳಿಕೆ)
10 ಗ್ರಾಂ ಚಿನ್ನ: ₹1,70,020 (ನಿನ್ನೆಗಿಂತ ₹490 ಇಳಿಕೆ)
100 ಗ್ರಾಂ ಚಿನ್ನ: ₹17,00,200 (ನಿನ್ನೆಗಿಂತ ₹4,900 ಇಳಿಕೆ)
ಇಂದಿನ ಬೆಳ್ಳಿ ದರ ಪಟ್ಟಿ
1 ಗ್ರಾಂ ಬೆಳ್ಳಿ ದರ ಇಂದು ₹295 ರೂ.
10 ಗ್ರಾಂ ಬೆಳ್ಳಿ ದರ ₹2,950 ರೂ.
100 ಗ್ರಾಂ ಬೆಳ್ಳಿ ಬೆಲೆ ₹29,500 ರೂ.
ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ (ಅಪ್ಪಟ ಚಿನ್ನ) 10 ಗ್ರಾಂ ಬೆಲೆ ಹೀಗಿದೆ:
ನಗರ24K ಚಿನ್ನದ ಬೆಲೆ (10 ಗ್ರಾಂ)
ಚೆನ್ನೈ₹17,073
ದೆಹಲಿ₹17,017
ವಡೋದರಾ ₹17,007
ಅಹಮದಾಬಾದ್₹17,007
ಬೆಂಗಳೂರು₹17,002
ಮುಂಬೈ ₹17,002
ಪುಣೆ ₹17,002
ಹೈದರಾಬಾದ್ ₹17,002
ಕೇರಳ ₹17,002
ಕೋಲ್ಕತ್ತಾ ₹17,002

