HomeBusinessಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ದರ ಎಷ್ಟು?

ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ದರ ಎಷ್ಟು?

ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್ 12) ಚಿನ್ನದ ಬೆಲೆ ಮತ್ತೊಮ್ಮೆ ಏರಿಕೆ ಕಂಡಿದ್ದು, ಆಭರಣ ಖರೀದಿದಾರರಿಗೆ ಗಾಯದ ಮೇಲೆ ಬಿಸಿ ಬರೆ ಎಳೆದಂತಾಗಿದೆ. ಮಂಗಳವಾರ ಕಂಡ ಬಂಪರ್ ಜಿಗಿತದ ಬಳಿಕ ಹಳದಿ ಲೋಹದ ಓಟವು ಇಂದು ಸಹ ಮುಂದುವರಿದಿದೆ. ಆದರೆ, ನಿನ್ನೆ ಪ್ರತಿ ಕೆಜಿಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಮಾತ್ರ ಇಂದು ಬದಲಾಗದೆ ಸ್ಥಿರ ವಹಿವಾಟು ನಡೆಸಿದೆ.

ಪ್ರಸ್ತುತ ದೇಶದಲ್ಲಿ 10 ಗ್ರಾಂನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,41,950 ರೂಪಾಯಿ ತಲುಪಿದ್ದರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,54,860 ರೂಪಾಯಿಯಾಗಿದೆ.

ಇತ್ತೀಚೆಗೆ ಪ್ರತಿ ಕೆಜಿಗೆ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸಮಾಧಾನಕರ ರೀತಿಯಲ್ಲಿ ಸ್ಥಿರವಾಗಿದ್ದು, ಪ್ರಸ್ತುತ 100 ಗ್ರಾಂ ಬೆಳ್ಳಿಯ ಬೆಲೆ 25,500 ರೂಪಾಯಿ (ಪ್ರತಿ ಗ್ರಾಂಗೆ 255 ರೂ) ತಲುಪಿದೆ. ತಮಿಳುನಾಡು ಹಾಗೂ ಕೇರಳ ಸೇರಿದಂತೆ ನೆರೆರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿ ಬೆಲೆ ಸುಮಾರು 26000 ರೂಪಾಯಿಯಷ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿವೆ ಆಗಸ್ಟ್ 12ರ ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ಪಟ್ಟಿ :

24 ಕ್ಯಾರಟ್ ಚಿನ್ನ (1 ಗ್ರಾಂ): ₹15,486

22 ಕ್ಯಾರಟ್ ಆಭರಣ ಚಿನ್ನ (1 ಗ್ರಾಂ): ₹14,195

18 ಕ್ಯಾರಟ್ ಚಿನ್ನ (1 ಗ್ರಾಂ): ₹11,614

ಬೆಳ್ಳಿ (1 ಗ್ರಾಂ): ₹255

ಬೆಂಗಳೂರು ಮಾರುಕಟ್ಟೆಯಲ್ಲೂ ದರಗಳು ಸ್ಥಿರ ಹಾಗೂ ಇಳಿಕೆಯ ಹಾದಿಯಲ್ಲಿದ್ದು, 10 ಗ್ರಾಂ ಆಭರಣ ಚಿನ್ನ ₹1,41,950 ರಲ್ಲಿ ವಹಿವಾಟು ನಡೆಸುತ್ತಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

​ನಗರಗಳ ಹೆಸರು ​ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,54,860

ನಾಗ್ಪುರ ₹1,54,860

ಮುಂಬೈ ₹1,54,860

ಚೆನ್ನೈ ₹1,54,910

ಕೋಲ್ಕತ್ತಾ ₹1,54,860

ಪಾಟ್ನಾ ₹1,54,910

ಸೂರತ್‌ ₹1,54,910

ಚಂಡೀಗಢ ₹1,55,010

ಲಕ್ನೋ ₹1,55,010

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular