HomeLatest NewsSHOCKING: ಗೋವಾದಲ್ಲಿ ಮತ್ತೊಂದು ಬರ್ಬರ ಹತ್ಯೆ: ಸ್ನೇಹಿತೆಯರನ್ನೇ ಕತ್ತು ಸೀಳಿ ಕೊಲೆಗೈದ ರಷ್ಯಾ ವ್ಯಕ್ತಿ

SHOCKING: ಗೋವಾದಲ್ಲಿ ಮತ್ತೊಂದು ಬರ್ಬರ ಹತ್ಯೆ: ಸ್ನೇಹಿತೆಯರನ್ನೇ ಕತ್ತು ಸೀಳಿ ಕೊಲೆಗೈದ ರಷ್ಯಾ ವ್ಯಕ್ತಿ

ಪಣಜಿ: ರಷ್ಯಾ ಮೂಲದ ವ್ಯಕ್ತಿಯೊಬ್ಬ ಗೋವಾದಲ್ಲಿ ತನ್ನ ಸ್ನೇಹಿತೆಯರನ್ನೇ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಉತ್ತರ ಗೋವಾದ ಅರಾಂಬೋಲ್ ಹಾಗೂ ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀತಾ (37) ಹಾಗೂ ಎಲೆನಾ ಕಸ್ತನೋವಾ (37) ಕೊಲೆಯಾದ ಸ್ನೇಹಿತೆಯರು. ಅಲೆಕ್ಸಿ ಲಿಯೊನೊವ್ ಎಂಬ ರಷ್ಯನ್ ವ್ಯಕ್ತಿ ಇಬ್ಬರನ್ನೂ ಹತ್ಯೆ ಮಾಡಿದ್ದಾನೆ.

ಎರಡು ದಿನಗಳ ಹಿಂದೆ ಜನವರಿ 14ರಂದು ಆರೋಪಿ ಮೊರ್ಜಿಮ್ ನಲ್ಲಿ ವಾಸವಿದ್ದ ಎಲೆನಾ ವನಿವಾ ಅವರನ್ನು ಕತ್ತು ಸೋಳಿ ಕೊಲೆಗೈದಿದ್ದಾನೆ. ಒಂದು ದಿನದ ಬಳಿಕ ಜನವರಿ 15ರಂದು 8 ಕಿ.ಮೀ ದೂರದಲ್ಲಿರುವ ತನ್ನ ಗೆಳತಿ ಎಲೆನಾ ಕಸ್ತನೋವಾಳನ್ನು ಭೇಟಿಯಾಗಲೆಂದು ಹೋಗಿದ್ದ. ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ಕತ್ತು ಸೀಳಿ ಕೊಲೆಗೈದು ಎಸ್ಕೇಪ್ ಆಗಿದ್ದಾನೆ. ವನೀವಾ ವಾಸವಾಗಿದ್ದ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರೋಪಿ ಅಲೆಕ್ಸಿ ಲಿಯೊನೊವ್ ನನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ಗೆಳತಿಯರನ್ನೇ ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular