HomeIndiaಜನರ ಸುರಕ್ಷತೆ ದೃಷ್ಟಿಯಿಂದ ಆಕ್ರಮಣಕಾರಿ ತಳಿ ನಾಯಿ ಸಾಕಣೆ ನಿಷೇಧಕ್ಕೆ ಚಿಂತನೆ

ಜನರ ಸುರಕ್ಷತೆ ದೃಷ್ಟಿಯಿಂದ ಆಕ್ರಮಣಕಾರಿ ತಳಿ ನಾಯಿ ಸಾಕಣೆ ನಿಷೇಧಕ್ಕೆ ಚಿಂತನೆ

ಪಣಜಿ: ಆಕ್ರಮಣಕಾರಿ ತಳಿ ನಾಯಿ ಸಾಕಣೆ ನಿಷೇಧಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ವಿಶ್ವ ರೇಬಿಸ್ ದಿನದಂದು ಮಾತನಾಡಿದ ಅವರು, ಜನರ ಸುರಕ್ಷತೆ ದೃಷ್ಟಿಯಿಂದ ಕೆಲವು ಆಕ್ರಮಣಕಾರಿ ನಾಯಿಗಳ ತಳಿ ಸಾಕಣೆ ನಿಷೇಧಿಸುವ ಕುರಿತು ಚಿಂತನೆ ನಡೆಸಲಾಗಿದೆ. ಕೆಲವು ತಳಿಗಳ ನಾಯಿಗಳು ತೀರಾ ಆಕ್ರಮಣಕಾರಿಯಾಗಿದ್ದು, ಜನರ ಮೇಲೆ ದಾಳಿ ಮಾಡುತ್ತವೆ. ಇಂತಹ ನಾಯಿಗಳನ್ನು ಕೆಲವರು ಸಾಕುತ್ತಾರೆ. ಆದರೆ, ಲಸಿಕೆ ಹಾಕಿಸುವುದಿಲ್ಲ. ಹೀಗಾಗಿ ಕೆಲವು ಆಕ್ರಮಣಕಾರಿ ತಳಿ ನಾಯಿ ನಿಷೇಧಕ್ಕೆ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನರು ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕುವಂತೆ ಒತ್ತಾಯಿಸಿದ ಸಾವಂತ್, ಜನರು ಇತರ ರಾಜ್ಯಗಳಿಂದ ನಾಯಿಗಳನ್ನು ತರುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ನಿಯಮಿತವಾಗಿ ನಾಯಿಗಳಿಗೆ ಲಸಿಕೆ ಹಾಕಬೇಕು ಎಂದು ಹೇಳಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular