HomeEntertainmentತಿಮ್ಮಪ್ಪನ ಸನ್ನಿಧಿಯಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ಕಿಸ್ : ರೂಮ್ ಬುಕ್ ಮಾಡ್ಕೊಳ್ಳಿ ಎಂದ...

ತಿಮ್ಮಪ್ಪನ ಸನ್ನಿಧಿಯಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ಕಿಸ್ : ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

ತಿಮ್ಮಪ್ಪನ ಸನ್ನಿಧಿಯಲ್ಲೇ (Lord Venkateswara temple) ನಟಿಗೆ ನಿರ್ದೇಶಕ ಕಿಸ್ ಕೊಟ್ಟ ವಿಚಾರ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ಘಟನೆ ಬಗ್ಗೆ ತರಹೇವಾರಿ ಕಮೆಂಟ್ ಬರುತ್ತಿದೆ. ಕೆಲವರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರೆ, ಕೆಲವರು ಅದು ಕಾಮನ್ ಬಿಡಿ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ದೇವಾಲಯದ ಪ್ರಧಾನ ಅರ್ಚಕರು (Venkateswara temple priest) ಪ್ರತಿಕ್ರಿಯೆ ನೀಡಿದ್ದು, ಇದು ಖಂಡನಾರ್ಹ ಕೃತ್ಯವಾಗಿದೆ. ಸಿನಿಮಾದವರು ಅಂದ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದಾ..? ಅದಕ್ಕೆ ಬೇಕಾದರೆ ನೀವು ರೂಮ್ ಬುಕ್ ಮಾಡ್ಕೊಳ್ಳಿ……ನಿಮಗೆ ಸೆನ್ಸ್ ಇರಲ್ವಾ….? ನಿಮ್ಮ ನಡವಳಿಕೆಯು ರಾಮಾಯಣ ಮತ್ತು ಸೀತಾ ದೇವಿಯನ್ನು ಅವಮಾನಿಸಿದಂತೆ. ಘಟನೆಯಿಂದ ಎಲ್ಲಾ ಭಕ್ತರಿಗೆ ಅವಮಾನವಾಗಿದೆ ಎಂದು ಸಿಡಿಮಿಡಿಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ನಟಿಸಿರುವ ಆದಿಪುರುಷ್ (Adipurush) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬಹಳ ಕುತೂಹಲ ಮೂಡಿಸಿದೆ. ಸದ್ಯ, ಸಿನಿಮಾದ ನಿರ್ದೇಶಕ ಓಂ ರಾವತ್ ದೇವಸ್ಥಾನದಲ್ಲೇ ನಟಿ ಕೃತಿ ಸನೋನ್ (Kriti Sanon) ಗೆ ಕಿಸ್ ಮಾಡುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.

ಜೂನ್ 7 ರಂದು ರಾವತ್, ಕೃತಿ ಅವರೊಂದಿಗೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ಚಲನಚಿತ್ರ ನಿರ್ಮಾಪಕರು ದೇವಾಲಯದ ಆವರಣದ ಹೊರಗೆ ಕೃತಿಗೆ ವಿದಾಯ ಹೇಳುವ ವೇಳೆ ನಟಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ಈ ರೀತಿಯ ನಡುವಳಿಕೆ ತಪ್ಪು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ದೇಶಕರು ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular