HomeKarnatakaವಿಡಿಯೋ ಕರೆಯಲ್ಲಿ ಖಾಸಗಿ ಅಂಗಾಂಗ ಪ್ರದರ್ಶಿಸಿ ಮಹಿಳೆಯಿಂದ ಅಸಭ್ಯ ವರ್ತನೆ: ಸಂಸದ ದೂರು

ವಿಡಿಯೋ ಕರೆಯಲ್ಲಿ ಖಾಸಗಿ ಅಂಗಾಂಗ ಪ್ರದರ್ಶಿಸಿ ಮಹಿಳೆಯಿಂದ ಅಸಭ್ಯ ವರ್ತನೆ: ಸಂಸದ ದೂರು

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ದಾವಣಗೆರೆಯ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ವಾಟ್ಸಾಪ್ ನಲ್ಲಿ ವಿಡಿಯೋ ಕರೆ ಮಾಡಿದ ಮಹಿಳೆ ಅಸಭ್ಯ ವರ್ತನೆ ತೋರಿದ್ದು, ಸಂಸದರು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜುಲೈ 20ರಂದು ರಾತ್ರಿ ಸಂಸದ ಸಿದ್ದೇಶ್ವರ ಬೆಂಗಳೂರಿನಲ್ಲಿ ಇದ್ದ ವೇಳೆ ಮಹಿಳೆ ಒಬ್ಬಳು ವಾಟ್ಸಾಪ್ ನಲ್ಲಿ ಹೇಗಿದ್ದೀರಾ ಎಂಬ ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಅವರು ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ನಂತರ ವಿಡಿಯೋ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ ಮಹಿಳೆಗೆ ಸಂಸದ ಸಿದ್ದೇಶ್ವರ ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ. ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಕರೆ ಕಡಿತಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಮತ್ತೆ ವಿಡಿಯೋ ಕರೆ ಮಾಡಿದ ಮಹಿಳೆ ಮುಖ, ಖಾಸಗಿ ಅಂಗಾಂಗ ಪ್ರದರ್ಶಿಸಿ ಅಸಭ್ಯ ವರ್ತನೆ ತೋರಿದ್ದು, ಸಂಸದರು ಪಕ್ಕದಲ್ಲಿದ್ದ ಪತ್ನಿಗೆ ಮೊಬೈಲ್ ಕೊಟ್ಟಿದ್ದಾರೆ. ಐದು ಬಾರಿ ಕರೆ ಮಾಡಿ ಫೋಟೋ, ವಿಡಿಯೋಗಳನ್ನು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಕುರಿತಾಗಿ ಸಂಸದರು ಪೊಲೀಸರಿಗೆ ದೂರು ನೀಡಿದ್ದು, ಜುಲೈ 21ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular