ಲಖ್ನೋ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಯುವಕನೊಬ್ಬ ಪ್ರೀತಿ ನಿರಾಕರಿಸಿದ ಯುವತಿಯನ್ನು ಪಿಸ್ತೂಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಬಳಿ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಬದೌತ್ ಪ್ರದೇಶದ ಮಹಾವತ್ಪುರಬವ್ಲಿ ಗ್ರಾಮದಲ್ಲಿ ನಡೆದಿದೆ.
ಗುಡ್ಡನ್ ಕೊಲೆಯಾಗಿರುವ ಯುವತಿ. ಸತ್ನಮ್(22) ಕೊಲೆ ಮಾಡಿ ನೇಣಿಗೆ ಶರಣಾದ ಯುವಕ.
ಲಕ್ಷ್ಮಿ ಸೈನಿ ಅವರ ಮಗಳಾದ ಗುಡ್ಡನ್ ಅವರು ಮನೆಯಲ್ಲೆ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದರು. ಇದೇ ಗ್ರಾಮದವನಾದ ಸತ್ನಮ್ ಬಹಳ ದಿನಗಳಿಂದ ಈಕೆ ಮೇಲೆ ಏಕಮುಖ ಪ್ರಿ?ತಿಗೆ ಒಳಗಾಗಿದ್ದ. ಇದರಿಂದಾಗಿ ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಒತ್ತಾಯಿಸತ್ತಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು.
ನಿನ್ನೆ ಗುಡ್ಡನ್ ದಿನಸಿ ತರಲು ಮನೆಯಿಂದ ಹೊರ ಹೋಗಿದ್ದಾಗ, ಇದಕ್ಕಾಗಿಯೇ ಕಾಯುತ್ತಿದ್ದ ಸತ್ನಮ್ ಪಿಸ್ತೂಲ್ನೊಂದಿಗೆ ಆಗಮಿಸಿ ಆಕೆಯನ್ನು ಅಡ್ಡಗಟ್ಟಿ ಪ್ರೆ?ಮ ನಿವೇದನೆ ಮಾಡಿಕೊಂಡಿದ್ದಾನೆ. ಆಗಲೂ ಒಪ್ಪದಿದ್ದಕ್ಕೆ ದೇಶಿ ನಿರ್ಮಿತ ಪಿಸ್ತೂಲ್ನ್ನು ತೆಗೆದು ತಲೆಗೆ ಗುಂಡು ಹಾರಿಸಿದ್ದಾನೆ. ಬಳಿಕ ನೇರವಾಗಿ ತನ್ನ ಮನೆಗೆ ತೆರಳಿ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.
ಸುದ್ದಿ ತಿಳಿದ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಗುಂಡೇಟಿನಿಂದ ಗಂಭೀರ ಗಾಯಗೊಂಡು ಬಿದಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ತಪಾಸಣೆ ನಡೆಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಳಿಕ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಸೂರಜ್ಕುಮಾರ್ ರೈ ತಿಳಿಸಿದ್ದಾರೆ.
ಗುರುಗ್ರಾಮ್(ಹರಿಯಾಣ)- ಕ್ಲಬ್ನಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಪೀಡಿಸಿದ ವ್ಯಕ್ತಿ, ಮದುವೆಯಾಗಲು ನಿರಾಕರಿಸಿದ ಆಕೆಯನ್ನು ಗುಂಡು ಹಾರಿಸಿ ಕೊಲೆ ಗೆ ಯತ್ನಿಸಿರುವ ಘಟನೆ ಹರಿಯಾಣದ ಗುರುಗ್ರಾಮ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಜಾಫ್ಘರ್ನ ನಿವಾಸಿ ಕಲ್ಪನಾ(25) ಕೊಲೆಯಾಗಿರುವ ಮಹಿಳೆ. ಈಕೆ ಕ್ಲಬ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂಗಮ್ ವಿಹಾರ್ನ ನಿವಾಸಿ ತುಷಾರ್ ಎಂಬಾತ ಈಕೆಯನ್ನು ಮದುವೆಯಾಗುವಂತೆ ಪ್ರಪೆÇೀಸಲ್ ಇಟ್ಟಿದ್ದ. ಇದನ್ನು ನಿರಾಕರಿಸಿದ ಕಾರಣ ಆಕೆಯನ್ನು ಕ್ಲಬ್ನಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಗುಂಡು ಹಾರಿಸಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಶೀಲನೆ ನಡೆಸಿದ್ದ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯಿಂದ ಹೇಳಿಕೆ ಪಡೆಯಲು ಸಾಧ್ಯವಾಗದಷ್ಟು ಗಂಭೀರ ಸ್ಥಿತಿಯಲ್ಲಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಪತಿ ಘಟನೆ ಸಂಬಂಧ ಪೊಲೀಸ್ ಠಾಣೆ ವಲಯ 29ಕ್ಕೆ ದೂರು ನೀಡಿದ್ದು, ತುಷಾರ್ ಒಂದು ತಿಂಗಳ ಹಿಂದೆ ಮನೆಗೆ ಬಂದು ನಮೊಂದಿಗೆ ಜಗಳವಾಡಿ ಹೋಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸ್ ತಂಡವು, ಸಂಗಮ್ ವಿಹಾರ್ ನಿವಾಸಿಗಳಾದ ತುಷಾರ್ ಅಲಿಯಾಸ್ ಜೊಂಟಿ(25) ಮತ್ತು ಈತನ ಸ್ನೇಹಿತ ಶುಭಮ್ ಅಲಿಯಾಸ್ ಜಾನಿ(24) ಎಂಬಿಬ್ಬರನ್ನು ಬಂಧಿಸಿದೆ.
ವಿಚಾರಣೆ ವೇಳೆ, ಆರು ತಿಂಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೆ?ಹ ಬೆಳೆಸಿದ್ದಾಗಿ ಮತ್ತು ಆಕೆಯನ್ನು ಮದುವೆಯಾಗಲು ಬಯಸಿದ್ದೆ,ಇದಕ್ಕೆ ಆಕೆ ಪದೇ ಪದೇ ನಿರಾಕರಿಸುತ್ತಿದ್ದಳು ಎಂದು ತುಷಾರ್ ಪೆÇಲೀಸರಿಗೆ ತಿಳಿಸಿದ್ದಾನೆ.
ಡಿಸೆಂಬರ್ 19ರಂದು ರಾತ್ರಿ ಕ್ಲಬ್ಗೆ ಹೋಗಿ ಹೋಗಿ, ಮತ್ತೊಮೆ ಆಕೆಗೆ ಪ್ರಪೋಸ್ ಮಾಡಿದ್ದೆ. ನಿರಾಕರಿಸಿದಾಗ ಗುಂಡು ಹಾರಿಸಿದ್ದಾಗಿ ತಿಳಿಸಿದ್ದಾನೆ.
ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

