ಶಿವಮೊಗ್ಗ: ಜೋಕಾಲಿ ಆಡುವಾಗ ಕುಣಿಕೆ ಕುತ್ತಿಗೆಗೆ ಬಿಗಿದುಕೊಂಡು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರಣಮ್ಯ(9) ಮೃತಪಟ್ಟ ಬಾಲಕಿ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಲಕ್ಕಿನಕೊಪ್ಪಕ್ಕೆ ಅಜ್ಜಿ ಮನೆಗೆ ತೆರಳಿದ್ದ ಬಾಲಕಿ ಪಂಚೆಯಿಂದ ಜೋಕಾಲಿ ಕಟ್ಟಿಕೊಂಡು ಆಟವಾಡುವಾಗ ಆಕಸ್ಮಿಕವಾಗಿ ಅದು ಕೊರಳಿಗೆ ಸಿಲುಕಿ ಮೃತಪಟ್ಟಿದ್ದಾಳೆ.
ರೂಮ್ ಬಾಗಿಲು ಹಾಕಿ ಕಿಟಕಿಗೆ ಪಂಚೆ ಕಟ್ಟಿ ಜೋಕಾಲಿ ಆಡುತ್ತಿದ್ದ ಪ್ರಣಮ್ಯ ಕುತ್ತಿಗೆ ಬಿಗಿ ಉಸಿರುಕಟ್ಟಿದೆ. ಕುಟುಂಬದವರು ಬಾಗಿಲು ತೆರೆಯುವಷ್ಟರಲ್ಲಿ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ವಿದ್ಯಾನಗರ ನಿವಾಸಿ ಶ್ರೀನಾಥ್ ಅವರ ಪುತ್ರಿ ಪ್ರಣಮ್ಯ ಶಾಲೆಗೆ ರಜೆ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ಹೋದಾಗ ದುರಂತ ನಡೆದಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

