VIDEO | ಪುಟ್ಟ ಬಾಲಕಿಯ ಎನರ್ಜಿಗೆ ಫಿದಾ ಆದ ನೆಟ್ಟಿಗರು

ಮೆರವಣಿಗೆಯಲ್ಲಿ ಸಾಗುತ್ತಿದ್ದ ನೃತ್ಯಗಾರರನ್ನು ಕಂಡು ಪುಟ್ಟ ಬಾಲಕಿಯೊಬ್ಬಳು ನಿಂತಲ್ಲೇ ಕುಣಿದು ಎಲ್ಲರನ್ನು ರಂಜಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಾಲಕಿಯ ಜೋಶ್ ಎಂತವರನ್ನು ಬೆರಗುಗೊಳಿಸುವಂತಿದೆ

ಯಾವುದೋ ಕಾರ್ಯಕ್ರಮವೊಂದರ ಮೆರವಣಿಗೆಯಲ್ಲಿ ಕಲಾವಿದರ ತಂಡವೊಂದು ವೇಷಭೂಷಣಗಳೊಂದಿಗೆ ಭರ್ಜರಿ ಸ್ಟೆಪ್ ಹಾಕುತ್ತಾ ರಸ್ತೆಯಲ್ಲಿ ಸಾಗಿ ಬಂದಿದೆ. ನಿಲ್ದಾಣವೊಂದರ ಬಳಿ ಪೋಷಕರೊಂದಿಗೆ ನಿಂತಿದ್ದ ಪುಟ್ಟ ಬಾಲಕಿ, ಮೆರವಣಿಗೆಯಲ್ಲಿನ ಕಲಾತಂಡದವರು ಹಾಕುತ್ತಿದ್ದ ನೃತ್ಯದ ಹೆಜ್ಜೆಗೆ ಸರಿಸಾಟಿಯಾಗಿ ತಾನೂ ಸ್ಟೆಪ್ ಹಾಕಲು ಶುರುಮಾಡಿದ್ದಾಳೆ. ಯಾವುದೇ ಪೂರ್ವ ತಯಾರಿಯೂ ಇಲ್ಲದೇ ಬಾಲಕಿ ನಿಂತ ಜಾಗದಲ್ಲೇ ಅದ್ಭುತವಾಗಿ ಹೆಜ್ಜೆ ಹಾಕಿದ್ದು, ಬಾಲಕಿ ಜೋಶ್ ಕಂಡು ಮೆರವಣಿಗೆಯ ಕಲಾವಿದರು ಕೆಲಕಾಲ ನಿಂತು ಬಾಲಕಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿರುವ ಪುಟ್ಟ ಬಾಲಕಿಯ ಡಾನ್ಸ್ ಎನರ್ಜಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read