HomeKarnatakaSHOCKING NEWS: ಪುಟ್ಟ ಬಾಲಕಿ ಮೇಲೆ ಮಲತಾಯಿ ಕ್ರೌರ್ಯ; ಬಾಸುಂಡೆ ಬರುವಂತೆ ಹೊಡೆದು, ಬರೆ ಇಟ್ಟ...

SHOCKING NEWS: ಪುಟ್ಟ ಬಾಲಕಿ ಮೇಲೆ ಮಲತಾಯಿ ಕ್ರೌರ್ಯ; ಬಾಸುಂಡೆ ಬರುವಂತೆ ಹೊಡೆದು, ಬರೆ ಇಟ್ಟ ಮಹಿಳೆ

ಬೆಂಗಳೂರು: ಮಲತಾಯಿ ದೌರ್ಜನ್ಯ, ಕ್ರೌರ್ಯಕ್ಕೆ ಪುಟ್ಟ ಬಾಲಕಿಯೊಬ್ಬಳು ನಲುಗಿ ಹೋಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯದಲ್ಲಿ ನಡೆದಿದೆ.

ಪುಟ್ಟ ಬಾಲಕಿಗೆ ಮಲತಾಯಿ ಮನಬಂದಂತೆ ಥಳಳಿಸಿದ್ದಾಳೆ ಪೈಪ್ ನಲ್ಲಿ ಬಾಸುಂಡೆ ಬರುವೆಂತೆ ಹೊಡೆದು, ಕೈಗೆ ಬರೆ ಇಟ್ಟು ರಾಕ್ಷಸಿಯಂತೆ ವರ್ತಿಸಿದ್ದಾಳೆ. ಮಲತಾಯಿಯ ಕ್ರೌರ್ಯ ತಡೆಯಲಾಗದೇ ಬಾಲಕಿ ತಪ್ಪಿಸಿಕೊಂಡು ಮನೆಯಿಂದ ಎದ್ದುಬಿದ್ದು ಹೊರಗೆ ಓಡಿ ಬಂದಿದ್ದಾಳೆ.

ಬಾಲಕಿ ಕುಂಟುತ್ತಾ, ಬೀಳುತ್ತಾ ಬರುವುದನ್ನು ಕಂಡ ಇನ್ನೋರ್ವ ಬಾಲಕಿ ವಿಚಾರಿಸಿದ್ದಾರೆ. ಪಕ್ಕದ ಮನೆಯ ಶೈನಿ ಎಂಬ ಮಹಿಳೆ ಬಾಲಕಿಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಪ್ರಶ್ನಿಸಿದ್ದಕ್ಕೆ ನನ್ನ ಮಗಳು ನನ್ನ ಇಷ್ಟ ಕೇಳಲು ನಿವ್ಯಾರು? ಆಕೆಗೆ ಬುದ್ಧಿ ಕಲಿಸಲು ಹೊಡೆದಿದ್ದಾಗಿ ಹೇಳಿದ್ದಾಳೆ. ಮಲತಾಯಿ ವಿರುದ್ಧ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಲತಾಯಿಯ ದೌರ್ಜನ್ಯದ ಬಗ್ಗೆ ಬಾಲಕಿ ಕಣ್ಣೀರಿಟ್ಟಿದ್ದು, ಅಪ್ಪ ಎರಡನೇ ಮದುವೆಯಾಗಿದ್ದು, ಎರಡನೇ ಅಮ್ಮ ಪ್ರತಿದಿನ ಒಂದಲ್ಲ ಒಂದು ಕಾರಣ ಹೇಳಿ ಸುಮ್ಮನೇ ಹೊಡೆಯುತ್ತಾರೆ. ಪೈಪ್ ನಲ್ಲಿ ಹೊಡೆದಿದ್ದಾರೆ. ತಲೆ, ಕಾಲು ಕೈಗಳಿಗೆ ಥಳಿಸಿದ್ದು, ಬರೆ ಇಟ್ಟಿದ್ದಾರೆ. ಅಪ್ಪನ ಬಳಿ ನನ್ನ ಬಗ್ಗೆ ಸುಳ್ಳು ಹೇಳಿ ಅವರನ್ನು ನಂಬಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾಳೆ.

 

For Latest News Updates, Join Our Whatsapp Community🚩
RELATED ARTICLES

Most Popular