HomeKarnatakaಬಸವನಗುಡಿ ಎಂಎಲ್‌ಎ ಅವರೇ, ಜಿಬಿಎ ಆಯುಕ್ತರೇ ಗಮನಿಸಿ: ಅಕ್ಕಪಕ್ಕದ ಏರಿಯಾಗಳ ಕಸದ ಡಂಪಿಂಗ್ ಯಾರ್ಡ್ ಆಗಿದೆ...

ಬಸವನಗುಡಿ ಎಂಎಲ್‌ಎ ಅವರೇ, ಜಿಬಿಎ ಆಯುಕ್ತರೇ ಗಮನಿಸಿ: ಅಕ್ಕಪಕ್ಕದ ಏರಿಯಾಗಳ ಕಸದ ಡಂಪಿಂಗ್ ಯಾರ್ಡ್ ಆಗಿದೆ ವಿಎಚ್‌ಬಿಸಿಎಸ್‌ ಲೇಔಟ್ 2ನೇ ತಿರುವು

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರ ಪ್ರದೇಶದಲ್ಲಿ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ನಿವಾಸಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಬಿ. ಟಿ. ಜವರೇಗೌಡ ಅವರು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಜಿಬಿಎ ಆಯುಕ್ತ ಮಹೇಶ್ವರ ರಾವ್ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

ಗಿರಿನಗರ 4ನೇ ಹಂತದ ವಿಎಚ್‌ಬಿಸಿಎಸ್‌ ಲೇಔಟ್‌ನ ನಿವಾಸಿಗಳ ಪರವಾಗಿ ಬರೆದಿರುವ ಈ ಮನವಿ ಪತ್ರದಲ್ಲಿ ತಮ್ಮ ಮನೆಯ ಎದುರಿನ ರಸ್ತೆ ಹಾಗೂ ಪಕ್ಕದ ಮುಚ್ಚಿದ ಮೋರಿಯ ಬಳಿ ಕಸದ ರಾಶಿ ಹೆಚ್ಚಾಗಿರುವುದಾಗಿ ದೂರಿದ್ದಾರೆ. ಅಲ್ಲದೇ ಆ ಪ್ರದೇಶದಲ್ಲಿ ಕಸ ಸಾಗಿಸುವ ವಾಹನಗಳು ರಸ್ತೆ ಬದಿಯಲ್ಲೇ ಹಲವು ದಿನಗಳಿಂದ ನಿಲುಗಡೆಯಾಗಿದ್ದು, ಹೆಗ್ಗಣಗಳು ಹಾಗೂ ಇಲಿಗಳ ತಾಣವಾಗಿ ರಸ್ತೆ ಮಾರ್ಪಟ್ಟಿದೆ ಎಂದು ಉಲ್ಲೇಖಿಸಿದ್ದಾರೆ.

ಇನ್ನು ಕಸದ ರಾಶಿಯಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತಿದ್ದು, ಮಕ್ಕಳ ಹಾಗೂ ಹಿರಿಯ ನಾಗರೀಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಕುರಿತ ಫೋಟೊ ಮತ್ತು ವಿಡಿಯೊಗಳನ್ನು ಚಿತ್ರೀಕರಿಸಿ ಅವ್ಯವಸ್ಥೆಯ ಚಿತ್ರಣವನ್ನು ಅಧಿಕಾರಿಗಳು ಹಾಗೂ ಶಾಸಕರಿಗೆ ಬಿಚ್ಚಿಡುವ ಯತ್ನವನ್ನೂ ಸಹ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡು ಕಸ ತೆರವುಗೊಳಿಸಿ, ಹಲವಾರು ದಿನಗಳಿಂದ ಸ್ಥಳದಲ್ಲೇ ಇರುವ ವಾಹನಗಳನ್ನು ಸ್ಥಳಾಂತರಿಸಿ, ಪ್ರದೇಶದ ಸ್ವಚ್ಛತೆಯನ್ನು ಕಾಪಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಅಲ್ಲದೇ ಕಸದ ರಾಶಿ ಹೊತ್ತು ರಸ್ತೆ ಬದಿಯಲ್ಲಿ ನಿಲುಗಡೆಯಾಗಿರುವ ವಾಹನಗಳು ಹಲವು ದಿನಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದು, ಅಕ್ಕಪಕ್ಕದ ಪ್ರದೇಶಗಳ ಕಸವನ್ನೂ ಸಹ ಇಲ್ಲಿ ತಂದು ಬಿಸಾಡಲಾಗುತ್ತಿದೆ ಎಂದು ಕೆಲ ಸ್ಥಳೀಯರು ಸಂಶಯ ವ್ತಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular