HomeKarnatakaBIG NEWS: ಯುವತಿ ಮೇಲೆ ಅತ್ಯಾಚಾರ; ಬ್ಲ್ಯಾಕ್ ಮೇಲ್: ಆರೋಪಿ ಅರೆಸ್ಟ್

BIG NEWS: ಯುವತಿ ಮೇಲೆ ಅತ್ಯಾಚಾರ; ಬ್ಲ್ಯಾಕ್ ಮೇಲ್: ಆರೋಪಿ ಅರೆಸ್ಟ್

ಬೆಂಗಳೂರು: ಯುವಕನೊಬ್ಬ ಯುವತಿ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ್ದ ಆರೋಪಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತ ಯುವತಿ ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೀದರ್ ಮೂಲದ ಯುವಕ ಶಿವಕುಮಾರ್ ಹೊಸಳ್ಳಿ (25) ಬಂಧಿತ ಆರೋಪಿ. 2018ರಲ್ಲಿ ಉಡುಪಿಯಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಆರೋಪಿ ಯುವತಿಗೆ ಪರಿಚಯನಾಗಿದ್ದ. ಯುವತಿಯ ತಾಯಿ ಬಳಿ ಮೊಬೈಲ್ ನಂಬರ್ ಪಡೆದು ಯುವತಿಗೆ ಮೆಸೇಜ್ ಮಾಡಲು ಆರಂಭಿಸಿದ್ದ. ಹೀಗೆ ಆರಂಭವಾದ ಪರಿಚಯದಿಂದ ಯುವತಿ ತಂದೆ- ತಾಯಿ ಮನೆಯಲ್ಲಿ ಇಲ್ಲದ ವೇಳೆ 2018ರಲ್ಲಿ ಯುವತಿಯ ನೆಲಮಂಗಲ ನಿವಾಸಕ್ಕೆ ಬಂದು ಯುವತಿ ಮೇಲೆ ಅತ್ಯಾಚಾರವೆಸಗಿ, ವಿಡಿಯೋ, ಫೋಟೋಗಳನ್ನು ಚಿತ್ರಿಸಿಕೊಂಡಿದ್ದ. ಆ ವೇಳೆ ಯುವತಿ ಅಪ್ರಾಪ್ತಳಾಗಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃತ್ಯದ ಬಳಿಕ ಆರೋಪಿ ಶಿವಕುಮಾರ್ ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವ ಬೆದರಿಕೆ ಹಾಕಿದ್ದ. ಆತನ ಬೆದರಿಕೆಗೆ ಹಾಗೂ ಮರ್ಯಾದೆಗೆ ಅಂಜಿದ ಯುವತಿ ಪೋಷಕರು 85,000 ಹಣವನ್ನೂ ನೀಡಿದ್ದಾರೆ. ಇದೀಗ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿರುವ ಆರೋಪಿ ಯುವತಿಗೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಹಾಗೂ ಆಕೆಯ ಪೋಷಕರು ನೆಲಮಂಗಲ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವಾಸವಾಗಿದ್ದ ಆರೋಪಿ ಶಿವಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕೇಸ್ ಹಾಗೂ ಹಲವು ಪ್ರಕರಣಗಳು ದಾಖಲಾಗಿವೆ.

For Latest News Updates, Join Our Whatsapp Community🚩
RELATED ARTICLES

Most Popular