HomeEntertainmentಬಿಗ್ ಬಾಸ್ ವಿನ್ನರ್ ಗಿಲ್ಲಿ ನೋಡಲು ವೇದಿಕೆಗೆ ನುಗ್ಗಿದ ಅಭಿಮಾನಿಗಳು: ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ

ಬಿಗ್ ಬಾಸ್ ವಿನ್ನರ್ ಗಿಲ್ಲಿ ನೋಡಲು ವೇದಿಕೆಗೆ ನುಗ್ಗಿದ ಅಭಿಮಾನಿಗಳು: ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ

ರಾಮನಗರ: ಬಿಗ್ ಬಾಸ್ ಸೀಜನ್ -12ರ ವಿನ್ನರ್ ಗಿಲ್ಲಿ ನಟನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಿಲ್ಲಿ ಹೋದಲೆಲ್ಲೆಲ್ಲ ಅಭಿಮಾನಿಗಳು ಸ್ಟಾರ್ ನಟನನ್ನು ನೋಡಲು ಮುಗಿ ಬೀಳುವಂತೆ ಮುಗಿ ಬೀಳುತ್ತಿದ್ದಾರೆ. ಗೊಂಬೆನಾಡು ಚೆನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಲ್ಲಿ ಫ್ಯಾನ್ಸ್ ಕ್ರೇಜ್ ಗೆ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ.

ಚೆನ್ನಪಟ್ಟಣದಲ್ಲಿ ನಡೆದ ಬೊಂಬೆನಾಡು ಉತ್ಸವದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳು ಜೈಕಾರಗಳನ್ನು ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ಗಲ್ಲಿಗೆ ಶೇಕ್ ಹ್ಯಾಂಡ್ ಮಾಡಿ ಮಾತನಾಡಿಸಬೇಕು ಎಂಬ ತವಕದಲ್ಲಿ ಏಕಾಏಕಿ ವೇದಿಕೆಗೆ ನುಗ್ಗಿರುವ ಘಟನೆ ನಡೆದಿದೆ. ಗಿಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿದ್ದಂತೆ ಸಾಗರೋಪಾದಿಯಲ್ಲಿ ವೇದಿಕೆಯತ್ತ ಮುನ್ನುಗ್ಗಿದ ಅಭಿಮಾನಿಗಳು ಗಿಲ್ಲಿ ಪರ ಘೋಷಣೆಗಳನ್ನು ಕೂಗುತ್ತಾ ಕೈಕುಲುಕಲು ವೇದಿಕೆಗೆ ಧಾವಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ವೇದಿಕೆಗೆ ಆಗಮಿಸಿ ಅಭಿಮಾನಿಗಳನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.

ಅಭಿಮಾನಿಗಳು ಮತ್ತೆ ವೇದಿಕೆಗಳನ್ನು ಹತ್ತದಂತೆ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ ಕೆಲ ಕಾಲ ಆತಂಕದ ವಾತಾವರಣವನ್ನುಂಟುಮಾಡಿದ್ದು ಸುಳ್ಳಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಗ್ ಬಾಸ್ ಸೀಜನ್ -12ರಲ್ಲಿ ಗಿಲ್ಲಿ ಗೆಲ್ಲಬೇಕೆಂದು ಅಬ್ಜಿಮಾನಿಗಳು ನಾಡಿನಾದ್ಯಂತ ಪ್ರಾರ್ಥಿಸಿದ್ದರು, ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ರ್ಯಾಲಿಗಳನ್ನೂ ಮಾಡಿದ್ದರು. ನಿರೀಕ್ಷೆಯಂತೆ ಗಿಲ್ಲಿ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಅಭಿಮಾಅನಿಗಳ ಸಂತಸ-ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಬಿಗ್ ಬಾಸ್ ಗೆದ್ದಿರುವ ಗಿಲ್ಲಿ ನಟನಿಗೆ 50 ಲಕ್ಷ ರೂ ಬಹುಮಾನ, ಕಾರು ಹಾಗೂ ನಟ ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂ ಬಹುಮಾನ ದೊರೆತಿದೆ.

For Latest News Updates, Join Our Whatsapp Community🚩
RELATED ARTICLES

Most Popular