
ಭೂಕಂಪಶಾಸ್ತ್ರಜ್ಞರು ಹಾಗೂ ಭೂವಿಜ್ಞಾನಿಗಳ ತಂಡವು ಟೆ ರಿಯು ಮೌಯಿ ಎಂದು ಕರೆಯಲ್ಪಡುವ ಜೀಲಾಂಡಿಯಾದ ನವೀಕರಿಸಿದ ನಕ್ಷೆಯನ್ನು ನಿಖರವಾಗಿ ರಚನೆ ಮಾಡಿದೆ. ಇವರ ಸಂಶೋಧನೆಗಳನ್ನು ಜರ್ನಲ್ ಟೆಕ್ಟೋನಿಕ್ಸ್ನಲ್ಲಿ ದಾಖಲು ಮಾಡಲಾಗಿದೆ. ಈ ಮೂಲಕ ವಿಶ್ವದಲ್ಲಿ ಎಂಟನೇ ಖಂಡದ ಉಗಮವಾದಂತಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಜೀಲೆಂಡಿಯಾ 1.89 ಮಿಲಿಯನ್ ಚದರ ಮೈಲಿ ವ್ಯಾಪ್ತಿಯನ್ನು ಹೊಂದಿರುವ ವಿಶಾಲವಾದ ಖಂಡವಾಗಿದೆ. ಇದು ಮಡಗಾಸ್ಕರ್ಗಿಂತ ಸುಮಾರು ಆರುಪಟ್ಟು ದೊಡ್ಡದಿದೆ ಎನ್ನಲಾಗಿದೆ. ಭೂವಿಜ್ಞಾನಿಗಳ ಈ ಸಂಶೋಧನೆಯಿಂದಾಗಿ ವಿಶ್ವದಲ್ಲಿ ಏಳರ ಬದಲು ಎಂಟು ಖಂಡಗಳು ಇವೆ ಎಂದು ಹೇಳಬಹುದಾಗಿದೆ.
ಅಂದಹಾಗೆ ಜಿಲ್ಯಾಂಡಿಯಾ ಸಮುದ್ರದ ಮೇಲ್ಮೈನ ಅಡಿಯಲ್ಲಿ ಮುಳುಗಿದೆ. ಇದರ ಭೂಭಾಗಗಳು ದ್ವೀಪದ ಆಕೃತಿಯನ್ನು ಹೊಂದಿದೆ. ಇದು ನೋಡಲು ನ್ಯೂಜಿಲೆಂಡ್ನಂತೆ ಭಾಸವಾಗುತ್ತದೆ. ಈ ಹೊಸ ಖಂಡದ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯೂಜಿಲೆಂಡ್ನ ಕ್ರೌನ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಿಎನ್ಎಸ್ ಸೈನ್ಸ್ನ ಭೂವಿಜ್ಞಾನಿ ಆಂಡಿ ಟುಲೋಚ್ ಈ ವಿಚಾರವಾಗಿ ಮಾತನಾಡಿದ್ದು, ಇದರ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಸಿಗೋದು ಸ್ವಲ್ಪ ತಡವಾಗಬಹುದು ಎಂದಿದ್ದಾರೆ.

