ಬೆಂಗಳೂರು : ಬೆಂಗಳೂರಿನಲ್ಲಿ 48 ಲಕ್ಷ ರೂ ಮೌಲ್ಯದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು , ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಗೊರಗುಂಟೆಪಾಳ್ಯದ ಬಿಡ್ಜ್ ಕೆಳಗೆ ಪೊಲೀಸರು ಗಾಂಜಾ ಸೀಜ್ ಮಾಡಿದ್ದಾರೆ. ಆರೋಪಿಗಳು ಒಡಿಶಾದಿಂದ ರೈಲು ಮೂಲಕ ಬೆಂಗಳೂರಿಗೆ ಗಾಂಜಾ ತರಿಸಿದ್ದರು ಎನ್ನಲಾಗಿದೆ. ಎನ್ ಡಿ ಪಿ ಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

