HomeLatest NewsBREAKING: ತೆಂಗಿನ ಸಸಿಗಳ ಮಧ್ಯೆ ಗಾಂಜಾ ಗಿಡಗಳನ್ನು ಇಟ್ಟು ಅಕ್ರಮ ಸಾಗಾಟ: ನಾಲ್ವರು ಆರೋಪಿಗಳು ಅರೆಸ್ಟ್

BREAKING: ತೆಂಗಿನ ಸಸಿಗಳ ಮಧ್ಯೆ ಗಾಂಜಾ ಗಿಡಗಳನ್ನು ಇಟ್ಟು ಅಕ್ರಮ ಸಾಗಾಟ: ನಾಲ್ವರು ಆರೋಪಿಗಳು ಅರೆಸ್ಟ್

ಮೈಸೂರು: ಗಾಂಜಾ ಸಾಗಾಟ ಮಾಡಲು ಆರೋಪಿಗಳು ನಡೆಸಿದ ಮಾಸ್ಟರ್ ಪ್ಲಾನ್ ನ್ನು ಮೈಸೂರು ಪೊಲೀಸರು ವಿಫಲಗೊಳಿಸಿದ್ದಾರೆ.ತೆಂಗಿನ ಸಸಿಗಳ ಮಧ್ಯೆ ಗಾಂಜಾ ಗಿಡಗಳನ್ನು ಇಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಸೂರು ಸಿಸ್ಬಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಸೈಯದ್ ಮಜರ್ (38), ಮುದಾಸಿರ್ ಅಹ್ಮದ್ (40), ಮೊಹಮ್ಮದ್ ಜುಬೇರ್ (32), ಅಬೂಬಕ್ಕರ್ ಸಿದ್ದಿಕ್ (55) ಬಂಧಿತರು. ಮೈಸೂರು-ಮಳವಳ್ಳಿ ಹೆದ್ದಾರಿಯಲ್ಲಿ ಆರೋಪಿಗಳು ಗಾಂಜಾ ಸಾಗಿಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂಗ 1.4 ಕೋಟಿ ಮೌಲ್ಯದ 280 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular