HomeLatest Newsಗಾಂಜಾ ಮಾರುತ್ತಿದ್ದವರನ್ನು ಹಿಡಿದುಕೊಟ್ಟ ಗ್ರಾಮಸ್ಥರು: ನೀವು ಹಿಡಿದುಕೊಟ್ರಿ, ಈಗ ತಪ್ಪಿಸಿಕೊಂಡಿದ್ದಾರೆ ಎಂದ ಪೊಲೀಸ್; ವಿಡಿಯೊ

ಗಾಂಜಾ ಮಾರುತ್ತಿದ್ದವರನ್ನು ಹಿಡಿದುಕೊಟ್ಟ ಗ್ರಾಮಸ್ಥರು: ನೀವು ಹಿಡಿದುಕೊಟ್ರಿ, ಈಗ ತಪ್ಪಿಸಿಕೊಂಡಿದ್ದಾರೆ ಎಂದ ಪೊಲೀಸ್; ವಿಡಿಯೊ

ನಿನ್ನೆ ( ಆಗಸ್ಟ್ 4 ) ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಗ್ರಾಮಸ್ಥರು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ಸಮಯದಲ್ಲಿ ಮಾಲು ಸಮೇತ ವಿಡಿಯೊವನ್ನೂ ಸಹ ಮಾಡಿಕೊಂಡಿದ್ದ ಗ್ರಾಮಸ್ಥರು ಅದನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದರು ಹಾಗೂ ಈ ವಿಡಿಯೊ ವೈರಲ್ ಸಹ ಆಗಿತ್ತು.

ಈ ವಿಡಿಯೊ ಕಂಡ ಜನತೆ ಗ್ರಾಮಸ್ಥರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಇವರನ್ನು ಗ್ರಾಮಸ್ಥರು ಪೊಲೀಸರಿಗೂ ಸಹ ಒಪ್ಪಿಸಿದ್ದಾರೆ ಎನ್ನಲಾಗಿದ್ದು, ಇದೀಗ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ನೀಡಿರುವ ಹೇಳಿಕೆ ಗ್ರಾಮಸ್ಥರಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತಂತೆ ಪೊಲೀಸ್ ಸಿಬ್ಬಂದಿಗಳನ್ನು ತಡೆದು ಮಾಹಿತಿ ಪಡೆದುಕೊಳ್ಳಲು ಗ್ರಾಮಸ್ಥರು ಮುಂದಾಗಿದ್ದು, ತಾವು ಹಿಡಿದುಕೊಟ್ಟ ಆರೋಪಿಗಳು ಎಲ್ಲಿ ಎಂದು ಕೇಳಿದ್ದಾರೆ. ಇದಕ್ಕೆ ಕಾರಿನಲ್ಲಿ ಕುಳಿತಿದ್ದ ಪೊಲೀಸ್ ಸಿಬ್ಬಂದಿ ಸಿಡಿಮಿಡಿಗೊಂಡಿದ್ದು, ಏಯ್.. ಎಂದು ಕಿಡಿಕಾರಿ ಪ್ರಶ್ನೆ ಮಾಡಿದವರಿಗೆ ಅವಾಜ್ ಹಾಕಿದ್ದಾರೆ.

ಈ ಘಟನೆಯನ್ನೂ ಸಹ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಮೈಸೂರಿನ ಸ್ಥಳೀಯ ಸುದ್ದಿ ವಾಹಿನಿ ಅಮೋಘ ‘ನ್ಯಾಯ ಕೇಳಿದ್ರೆ ಕೋಪ ಯಾಕೆ ಪೊಲೀಸಪ್ಪ?’ ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಆ ಪೊಲೀಸ್ ಮಾತನಾಡಿದ್ದು, ‘ನೀವು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಮೂವರು ಆರೋಪಿಗಳನ್ನು ಹಿಡಿದುಕೊಟ್ಟಿದ್ರಿ, ಆದರೆ ಅವರು ಈಗ ಪರಾರಿಯಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ಗ್ರಾಮಸ್ಥರು ಹಿಡಿದುಕೊಟ್ಟ ಆರೋಪಿಗಳು ಪೊಲೀಸರ ವಶಕ್ಕೆ ಹೋದ ಬಳಿಕ ತಪ್ಪಿಸಿಕೊಳ್ಳುವುದು ಎಂದರೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉಲ್ಲೇಖಿಸಿ ಇದರ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.

https://x.com/alpasankhyata/status/2084701860619763841?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular