HomeKarnatakaBIG NEWS: ನನಗೆ ಸಚಿವ ಸ್ಥಾನದ ಆಸೆಯಿಲ್ಲ: ಹಿರಿಯರು ಮತ್ತು ಅರ್ಹರಿಗೆ ಕೊಡಲಿ: ಶಾಸಕ ಗಣಿಗ...

BIG NEWS: ನನಗೆ ಸಚಿವ ಸ್ಥಾನದ ಆಸೆಯಿಲ್ಲ: ಹಿರಿಯರು ಮತ್ತು ಅರ್ಹರಿಗೆ ಕೊಡಲಿ: ಶಾಸಕ ಗಣಿಗ ರವಿ ಹೇಳಿಕೆ

ಮಂಡ್ಯ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ಸಂತಸದ ವಿಚಾರ. ಡಿ.ಕೆ.ಶಿವಕುಮಾರ್ ಅವರ ೪೦ ವರ್ಷಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಶಾಸಕ ಗಣಿಗ ರವಿ ತಿಳಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿ, ಸಿದ್ದರಾಮಯ್ಯ ಅವರು ಒಂದು ಕಪ್ಪು ಚುಕ್ಕೆ ಇಲ್ಲದೇ ಆಡಲಿತ ನಡೆಸಿದ್ದಾರೆ. ಅದನ್ನೇ ಡಿ.ಕೆ.ಶಿವಕುಮಾರ್ ಮುಂದುವರೆಸಿಕೊಂಡು ಹೋಗುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟು ದಿನಗಳ ಕಾಲ ವಿಪಕ್ಷಗಳು ಸಿದ್ದರಾಮಯ್ಯ ಅವರ ಆಡಳಿತ ಸರಿಯಿಲ್ಲ ಎನ್ನುತ್ತಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗಿದೆ ಎನುತ್ತಿದ್ದಾರೆ. ವಿರೋಧ ಪಕ್ಷಗಳದ್ದು ಡಬಲ್ ಸ್ಟ್ಯಾಂಡರ್ಡ್ ಎಂದು ಕಿಡಿಕಾರಿದರು.

ನಾಯಕತ್ವ ಬದಲಾವಣೆಯಲ್ಲಿ ಜಗಳವಾಗುತ್ತದೆ ಎಂದು ವಿಪಕ್ಷಗಳು ನಿರೀಕ್ಷಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸ್ಮೂತ್ ಆಗಿ ಅಧಿಕಾರ ಹಂಚಿಕೆಯಾಗಿದೆ ಎಂದು ಹೇಳಿದರು.

ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿದ ಗಣಿಗ ರವಿ, ನಾನು ಮೊದಲ ಬಾರಿ ಗೆದ್ದಿದ್ದೇನೆ. ನನಗೆ ಸಚಿವ ಸ್ಥಾನದ ಆಸೆಯಿಲ್ಲ. ಹಿರಿಯರು ಹಾಗೂ ಅರ್ಹ ಹೊಸಬರಿಗೂ ಅವಕಾಶ ನೀಡಲಿ. ಅಶೋಕ್ ರೈ, ಶಿವಗಂಗಾ, ಭರತ್ ರೆಡ್ಡಿ ಅಂತವರಿಗೂ ಅವಕಾಶ ಸಿಗಲಿ ಎಂದಿದ್ದಾರೆ.

ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ಕೆಲಸ ಮಾಡಬೇಕಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಅನುದಾನ ಸಿಕ್ಕರೆ ನನಗೆ ಸಿಕ್ಕಂತೆ. ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗಲಿಇ ಎಂಬುದು ಬೇಡಿಕೆ. ಚಲುವರಾಯಸ್ವಾಅಮಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಬೇರೆ ಕೋಟಾಗಳಿವೆ. ಆದರೆ ರಮೇಶ್ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಗೆದ್ದಿದ್ದಾರೆ. ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಇನ್ನಷ್ಟು ಅಭಿವೃದ್ದಿ ಆಗಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular