HomeLatest Newsಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು!

ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು!

ದಾವಣಗೆರೆ: ಕಳ್ಳರು-ಖದೀಮರಿಗೆ ದೇವರು-ದೇವಸ್ಥಾನ ಎಂಬ ಕಿಂಚಿತ್ತೂ ಭಯ-ಭಕ್ತಿ ಎಂಬುದೂ ಇದ್ದಂತಿಲ್ಲ. ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಕಳ್ಳರಿಗೆ ದೇವರಾದರೇನು? ದೇವಾಲಯವಾದರೇನು? ಮನೆಯಾದರೇನು? ಸಿಕ್ಕಿದ್ದನ್ನು ದೋಚುವುದೇ ಕೆಲಸ. ಕಳ್ಳರ ಗುಂಪು ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಯನ್ನೇ ಕದ್ದೊಯ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಜಗಳೂರು ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡಿ ಗನೇಶ್ ಮೂರ್ತಿ ತಂದು ಪ್ರತಿಷ್ಠಾಪಿಸಲಾಗಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಗಣೇಶ ಮೂರ್ತಿ ಕಳ್ಳತನಾಗಿದೆ.

ರಾತ್ರಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದೀಗ ಕಳ್ಳರ್ಯಾರೋ ಗಣಪತಿ ಮೂರ್ತಿಯನ್ನೇ ಕದ್ದೊಯ್ದಿದ್ದಾರೆ. ಬೆಳಿಗ್ಗೆ ಗಣೇಶ ಮೂರ್ತಿಗೆ ಪೂಜೆಗೆಂದು ಸ್ಥಳಕ್ಕೆ ಆಗಮಿಸಿದಾಗಲೇ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮಸ್ಥರು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular