HomeKarnatakaವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಶಾಸಕ ಶರಣಗೌಡ ಕಂದಕೂರು ಮೌನ ಪ್ರತಿಭಟನೆ: ಗುರುಮಿಟ್ಕಲ್ ಬರ ಪೀಡಿತ...

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಶಾಸಕ ಶರಣಗೌಡ ಕಂದಕೂರು ಮೌನ ಪ್ರತಿಭಟನೆ: ಗುರುಮಿಟ್ಕಲ್ ಬರ ಪೀಡಿತ ಎಂದು ಘೋಷಿಸುವಂತೆ ಆಗ್ರಹ: ಯಾದಗಿರಿಯಲ್ಲಿಯೂ ಪ್ರತಿಭಟನೆ

ಬೆಂಗಳೂರು: ಗುರುಮಿಟ್ಕಲ್, ಯಾದಗಿರಿ ಕ್ಷೇತ್ರಗಳನ್ನು ಬರ ಪಟ್ತಿಗೆ ಸೇರಿಸದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗುರುಮಿಟ್ಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಗುರುಮಿಟ್ಕಲ್ ಮತ್ತು ಯಾದಗಿರಿ ಕ್ಷೇತ್ರವನ್ನ ಬರ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ನನ್ನ ಕ್ಷೇತ್ರ ಗುರುಮಿಟ್ಕಲ್ ಹಾಗೂ ಯಾದಗಿರಿ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಪ್ಪು ಬಟ್ಟೆ ಧರಿಸಿ, ಹಸಿರು ಶಾಲು ಹಾಕಿ, ಬಿತ್ತಿ ಪತ್ರ ಹಿಡಿದು ಶಾಸಕ ಕಂದಕೂರ್ ಧರಣಿ ನಡೆಸಿದ್ದಾರೆ. ಗುರುಮಿಟ್ಕಲ್ ಮತ್ತು ಯಾದಗಿರಿ ಕ್ಷೇತ್ರವನ್ನ ಕೂಡಲೇ ಬರ ಪಟ್ಟಿಗೆ ಸೇರಿಸಬೇಕು ಎಂದು ಪಟ್ಟು ಹಿಡಿದ್ದಾರೆ.

ಧರಣಿ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಕಂದಕೂರ್, ನನ್ನ ಕ್ಷೇತ್ರ ಬರಕ್ಕೆ ತುತ್ತಾಗಿದೆ. ಹೀಗಿದ್ದರೂ ಸರ್ಕಾರ ಬರ ಅಂತ ಘೋಷಣೆ ಮಾಡಿಲ್ಲ. ಶರಣಗೌಡನ ಮೇಲೆ ಸರ್ಕಾರದಲ್ಲಿ ಇರೋರಿಗೆ ಜ್ವರ ಬಂದಿದೆ. ಎರಡೂ ಬರ ಪಟ್ಟಿಯಲ್ಲೂ ನನ್ನ ಕ್ಷೇತ್ರ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ-ಜೆಡಿಎಸ್ 17 ಕ್ಷೇತ್ರದಲ್ಲಿ ಮಾತ್ರ ಬರ ಅಂತ ಸರ್ಕಾರ ಘೋಷಣೆ ಮಾಡಿದೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಮಾತ್ರ ಬರ ಬರೋದಾ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ 3ನೇ ಪಟ್ಟಿಯಲ್ಲಿ ನನ್ನ ಕ್ಷೇತ್ರ ಸೇರಿಸುವ ಭರವಸೆ ಇದೆ. 3ನೇ ಪಟ್ಟಿಯಲ್ಲಿ ಸೇರಿಸಿಲ್ಲ ಅಂದರೆ ಇದು ರಾಜಕೀಯ ಟಾರ್ಗೆಟ್ ಆಗುತ್ತದೆ. 3ನೇ ಪಟ್ಟಿಯಲ್ಲಿ ಸೇರಿಸಿಲ್ಲ ಅಂದರೆ ಏನ್ ಮಾಡ್ತೀನಿ ಅಂತ ಹೇಳಲ್ಲ. ಮಾಡಿ ತೋರಿಸ್ತೀನಿ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಯಾದಗಿರಿ ಜಿಲ್ಲಾ ಬಂದ್:

ಮತ್ತೊಂದೆಡೆವ್ ಯಾದಗಿರಿ ಜಿಲ್ಲೆಯ ಬರದ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲು ಯಾದಗಿರಿ ಜಿಲ್ಲಾ ಬಂದ್‌ಗೆ ಸರ್ವ ಸಂಘಟನೆಗಳು ಕರೆ ನೀಡಿವೆ.

ಯಾದಗಿರಿಯ 5 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಈ ಬಂದ್‌ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಅಂಗಡಿ, ಮುಂಗಟ್ಟು, ವ್ಯಾಪಾರ ವಹಿವಾಟು, ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.

ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಯಾದಗಿರಿ ಜಿಲ್ಲೆಗೆ ಅನ್ಯಾಯವಾಗಿದ್ದು, ಯಾದಗಿರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ನದಾತರಿಗಾಗಿ ಬಂದ್‌ಗೆ ಕರೆ ನೀಡಲಾಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲಿಸಲಾಗಿದೆ. ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣ, ಸುಭಾಷ್ ಸರ್ಕಲ್ ಸೇರಿ ಹಲವು ಕಡೆ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಗಳು ನಡೆದಿವೆ.

ಹೋರಾಟಗಾರರ ಮನವಿಗೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ಪಂದಿಸುತ್ತಿದ್ದು, ಬಂದ್‌ಗೆ ಬೆಂಬಲ ಸೂಚಿಸಿ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಬರದ ಸಂಕಷ್ಟಕ್ಕೆ ಸರ್ಕಾರದ ಗಮನ ಸೆಳೆಯಲು ಯಾದಗಿರಿ ಜನತೆ ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದು, ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular