ಗದಗ: ಅಕ್ರಮವಾಗಿ ನಡೆಸಲಾಗುತ್ತಿದ್ದ ಮಣ್ಣು ಗಣಿಗಾರಿಕೆಯ ಹೊಂಡದಲ್ಲಿ ಬಿದ್ದು ನರ್ಸಿಂಗ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ತಾಲೂಕಿನ ಕಣಗಿನಾಳ ರಸ್ತೆ ಬಳಿ ನಡೆದಿದೆ.
ಹೋಳಿ ಹಬ್ಬದ ಬಣ್ಣ ಆಡಿ ಆರೇಳು ಸ್ನೇಹಿತರು ಸ್ನಾನಕ್ಕೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, 30-40 ಅಡಿ ಆಳ ಹೊಂಡ ತೆಗೆಯಲಾಗುತ್ತಿದೆ. ಈ ಹಿಂದೆ ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ, ಚಿಂಚಲಿ ಗ್ರಾಮಗಳಲ್ಲಿ ಇದೇ ರೀತಿಯ ಹೊಂಡದಲ್ಲಿ ಬಿದ್ದು ಮಕ್ಕಳು, ಯುವಕರು ಮೃತಪಟ್ಟಿದ್ದರು.
ಕಳೆದ ವಾರವಷ್ಟೇ ಚಿಂಚಲಿ ಗ್ರಾಮದಲಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಅಕ್ರಮ ಮಣ್ಣು ಗಣಿಗಾರಿಕೆಗೆ ಕಡ್ವಾಣ ಹಾಕುವ ಕೆಲಸ ಮಾಡಿಲ್ಲ ಎಂದು ಆಗ್ರಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

