HomeKarnatakaBIG NEWS: ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ಹರಿದ ಕಾಂಕ್ರಿಟ್ ಮಿಕ್ಸಿಂಗ್ ವಾಹನ; ಸ್ಥಳದಲ್ಲೇ...

BIG NEWS: ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ಹರಿದ ಕಾಂಕ್ರಿಟ್ ಮಿಕ್ಸಿಂಗ್ ವಾಹನ; ಸ್ಥಳದಲ್ಲೇ ಸಾವು

ಗದಗ: ಕಾಂಕ್ರಿಟ್ ಮಿಕ್ಸಿಂಗ್ ವಾಹನ ಹರಿದು ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಾವನ್ನಪ್ಪಿರುವ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ನಲ್ಲಿ ನಡೆದಿದೆ.

ರಮೇಶ್ ಡಂಬಳ (42) ಮೃತ ಹೆಡ್ ಕಾನ್ಸ್ ಟೇಬಲ್. ಗಜೇಂದ್ರಗಢ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಅವರ ಮನೆಯಲ್ಲಿ ನಾಳೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹೂವು-ಹಣ್ಣು, ಪೂಜೆ ಸಾಮಗ್ರಿಗಳೊಂದಿಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು.

ಈ ವೇಳೆ ಕಾಂಕ್ರಿಟ್ ಮಿಕ್ಸಿಂಗ್ ವಾಹನ ಡಿಕ್ಕಿ ಹೊಡೆದಿದ್ದು, ಕಾನ್ಸ್ ಟೇಬಲ್ ಮೇಲೆಯೇ ಹರಿದು ಹೋಗಿದೆ. ಸ್ಥಳದಲ್ಲೇ ರಮೇಶ್ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಡಿವೈ ಎಸ್ ಪಿ ಜೆ.ಹೆಚ್ ಇನಾಮದಾರ್, ಸಿಪಿಐ ಶಿವಯೋಗಿ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular