ಗದಗ: ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಅಮಾನುಷ ಘಟನೆ ರಾಜ್ಯದಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥೆ ಮೇಲೆ ಕಾಮುಕರು ನಿರಂತರ ಅತ್ಯಾಚಾರವೆಸಗಿರುವ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.
ನಾಲ್ವರು ಕಾಮುಕರು ಮಾನಸಿಕ ಅಸ್ವಸ್ಥ ಯುವತಿ ಮೇಲೆ ನಿರಂತರ ಅತ್ಯಚಾರವೆಸಗಿದ್ದಾರೆ. ಸಂತ್ರಸ್ತ ಯುವತಿ 3 ತಿಂಗಳ ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಮುಚ್ಚಿ ಹಾಕಲು ಯುವತಿಗೆ ಗರ್ಭಪಾತ ಮಾಡಿಸಿದ್ದಾರೆ ದುರುಳರು.
ಬೆಟಗೇರಿ ನಿವಾಸಿಗಳಾದ ಸಿಕಂದರ ಬೇಪಾರಿ, ಶಬ್ಬೀರ ಲಂಗೋಟಿ, ಪ್ರದೀಪ್ ನವಲೇಕರ್, ಭರತ್ ಕೊರವರ ಎಂಬುವವರು ಈ ಕೃತ್ಯವೆಸಗಿದ್ದಾರೆ. ಆರ್.ಎಂಪಿ ವೈದ್ಯ ನಾಗರಾಜ್ ಕಮತರ, ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ರೇಖಾ ಹಾಗೂ ಸಂದೀಪ್ ಎಂಬುವವರಿಂದ ಗರ್ಭಪಾತ ಮಾಡಲಾಗಿದೆ. ಯುವತಿಗೆ 10 ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾರೆ. ಗಾಗ ಮಹಿಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಮುಕ ಆರೋಪಿಗಳು ಸೇರಿ 7 ಜನರನ್ನು ಬಂಧಿಸಿದ್ದಾರೆ. ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಿನ್ನೆಲೆಯನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಈ ಹಿಂದೆ ಆಕೆ ಎಷ್ಟು ಗರ್ಭಪಾತದಂತಹ ಕೃತ್ಯವೆಸಗಿದ್ದಾಳೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಗರ್ಭಪಾತದ ಮಾತ್ರೆಯನ್ನು ವೈದ್ಯರ ಸಲಹೆಯಿಲ್ಲದೇ ನೀಡಿದ್ದ ಔಷಧಿ ಅಂಗಡಿ ಮಾಲೀಕನ ಪತ್ತೆಗೂ ಬಲೆ ಬೀಸಲಾಗಿದೆ.

