HomeLatest Newsಶಾಸಕ ಜಿ.ಟಿ.ದೇವೇಗೌಡ ನಮ್ಮೊಂದಿಗಿಲ್ಲ: ಪಕ್ಷದ ಬಗ್ಗೆ ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕೆ? ಕುಮಾರಸ್ವಾಮಿ ಆಕ್ರೋಶ

ಶಾಸಕ ಜಿ.ಟಿ.ದೇವೇಗೌಡ ನಮ್ಮೊಂದಿಗಿಲ್ಲ: ಪಕ್ಷದ ಬಗ್ಗೆ ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕೆ? ಕುಮಾರಸ್ವಾಮಿ ಆಕ್ರೋಶ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಹಿರಿಯ​​ ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಮ್ಮೊಂದಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಅವರು ನಮ್ಮೊಂದಿಗಿಲ್ಲ. ಜಿ.ಟಿ.ದೇವೇಗೌಡ ಬೇರೆ ಮಹಾನ್ ನಾಯಕರ ಜೊತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಮುಂದೆ ಜಿ.ಟಿ. ದೇವೇಗೌಡ ಹೆಸರನ್ನು ಪ್ರಸ್ತಾಪ ಮಾಡಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆ ನಡೆದಿದೆ. ನಾನು ರಾಜೀನಾಮೆ ಕೊಡುವ ತಪ್ಪನ್ನು ಏನು ಮಾಡಿದ್ದೆ? ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಹಳಷ್ಟು ಜನ ಅಭ್ಯರ್ಥಿಗಳು ಇದ್ದಾರೆ. ಬಹಳಷ್ಟು ಜನರನ್ನು ಬೆಳೆಸಿದ್ದೇವೆ, ಮೆರೆಸಿದ್ದೇವೆ ಎಂದು ಹೇಳಿಕೊಳ್ತಾರೆ. ಯಾವಾಗ ಯಾರನ್ನು ಮೆರೆಸುತ್ತಾರೋ ಯಾರಿಗೆ ಗೊತ್ತು. ಈಗ ಯಾರೋ ಒಬ್ಬರನ್ನು ಮೆರೆಸಲು ಜಿಟಿಡಿ ಹೊರಟಿದ್ದಾರೆ ಎಂದು ಗುಡುಗಿದರು.

ಜಿ.ಟಿ.ದೇವೇಗೌಡರಿಗೆ ನಿಯತ್ತು ಎಂಬುದೇನಾದರೂ ಇದೆಯಾ? ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಭಾವನಾತ್ಮಕ ಸಂಬಂಧ ಇದೆ. ಮುಂಡೇಶ್ವರಿ ಕ್ಷೇತ್ರದಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲ್ತಾರೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular