HomeKarnatakaBIG NEWS : ದರೋಡೆ ಹಣದಿಂದ ನಟಿಯರ ಜೊತೆ ಮೋಜು- ಮಸ್ತಿ, 3 ಕೋಟಿ ಮನೆ...

BIG NEWS : ದರೋಡೆ ಹಣದಿಂದ ನಟಿಯರ ಜೊತೆ ಮೋಜು- ಮಸ್ತಿ, 3 ಕೋಟಿ ಮನೆ ಗಿಫ್ಟ್ : ಬೆಂಗಳೂರಲ್ಲಿ ‘ಕುಖ್ಯಾತ ಕಳ್ಳ’ ಅರೆಸ್ಟ್.!

ಬೆಂಗಳೂರು : ಕಳ್ಳತನ ಮಾಡಿ ಅದರಿಂದ ಬಂದ ಹಣದಿಂದ ಬಾಲಿವುಡ್ ನಟಿ, ಹಲವರ ಜೊತೆ ಮೋಜು- ಮಸ್ತಿ ಮಾಡುತ್ತಿದ್ದ ಕುಖ್ಯಾತ ಕಳ್ಳನೋರ್ವನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಎಂದು ಗುರುತಿಸಲಾಗಿದೆ. ಮನೆ ಕಳ್ಳತನದಿಂದ ಬಂದ ಹಣದಿಂದ ಈತ ಪ್ರೇಯಸಿಗೆ 3 ಕೋಟಿ ಮನೆ ಖರೀದಿಸಿ ಕೊಟ್ಟಿದ್ದನು.

ಅಲ್ಲದೇ ಬಾಲಿವುಡ್ ಸೇರಿ ಹಲವು ನಟಿಯರ ಸಂಪರ್ಕ ಬೆಳೆಸಿಕೊಂಡಿದ್ದನು. ಅಲ್ಲದೇ ಅವರಿಗಾಗಿ ಕೋಟ್ಯಾಂತರ ಹಣ ಖರ್ಚು ಮಾಡಿದ್ದನು. ಈತನ ವಿರುದ್ಧ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು, ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular