HomeLatest Newsಫ್ರೆಂಡ್‌ ಮೇಲೆ ನಂಬಿಕೆ ಇಟ್ಟು ಕ್ರೆಡಿಟ್ ಕಾರ್ಡ್ ನೀಡಿ 3.5 ಲಕ್ಷ ರೂ. ಕಳೆದುಕೊಂಡ ಯುವಕ

ಫ್ರೆಂಡ್‌ ಮೇಲೆ ನಂಬಿಕೆ ಇಟ್ಟು ಕ್ರೆಡಿಟ್ ಕಾರ್ಡ್ ನೀಡಿ 3.5 ಲಕ್ಷ ರೂ. ಕಳೆದುಕೊಂಡ ಯುವಕ

ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಬಹುದು, ಆದರೆ ಹಣಕಾಸಿನ ವಿಷಯದಲ್ಲಿ ಅತಿಯಾದ ನಂಬಿಕೆ ಇಡಬಾರದು” ಎಂಬುದಕ್ಕೆ ಸಾಕ್ಷಿಯಂತಿದೆ ಈ ಘಟನೆ. ತನ್ನ ಆಪ್ತ ಸ್ನೇಹಿತನಿಗೆ ಕ್ರೆಡಿಟ್ ಕಾರ್ಡ್ ಬಳಕೆಗೆ ಕೊಟ್ಟಿದ್ದ ಯುವಕನೊಬ್ಬ, ಈಗ ಬರೋಬ್ಬರಿ 3.5 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿ ಆತಂಕದಲ್ಲಿದ್ದಾನೆ.

ಮುಂಬೈ ಮೂಲದ ಈ ಘಟನೆ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಂತ್ರಸ್ತ ಯುವಕ ರೆಡ್ಡಿಟ್ (Reddit) ಜಾಲತಾಣದ r/LegalAdviceIndia ಫೋರಮ್‌ನಲ್ಲಿ ತನ್ನ ಅಳಲನ್ನು ತೋಡಿಕೊಂಡು ಕಾನೂನು ನೆರವು ಕೋರಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳೆಯ ನಂಬಿಕೆಗೆ ಬಿದ್ದ ಭಾರಿ ಪೆಟ್ಟು

ಮುಂಬೈನಲ್ಲಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ತನ್ನ ಸ್ನೇಹಿತ ಈ ಹಿಂದೆ ಕೂಡ ಹಲವು ಬಾರಿ ಕ್ರೆಡಿಟ್ ಕಾರ್ಡ್ ಬಳಸಿದ್ದ. ಆಗೆಲ್ಲಾ ಸರಿಯಾದ ಸಮಯಕ್ಕೇ ಹಣ ವಾಪಸ್ ನೀಡಿದ್ದರಿಂದ, ಯುವಕ ಈ ಬಾರಿಯೂ ಯಾವುದೇ ಅನುಮಾನವಿಲ್ಲದೆ ಕಾರ್ಡ್ ನೀಡಿದ್ದ.

ಆದರೆ, ಈ ಬಾರಿ ಆ ಸ್ನೇಹಿತ ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳು, ಪ್ರವಾಸದ ಖರ್ಚುಗಳು ಹಾಗೂ ಹಳೆಯ ಕೆಲವು ಖರೀದಿಗಳನ್ನು ಸೇರಿಸಿ ₹3.5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾನೆ. ಆರಂಭದಲ್ಲಿ “ಹಣ ವಾಪಸ್ ಕೊಡುತ್ತೇನೆ, ಸ್ವಲ್ಪ ದಿನ ಕಾಯಬೇಕು” ಎಂದು ನಂಬಿಸಿದ್ದ ಆತ, ದಿನಗಳು ಕಳೆದಂತೆ ಫೋನ್ ಕಾಲ್‌ ಹಾಗೂ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿದ್ದಾನೆ.

‘ಡಿಸೆಂಬರ್‌ನಲ್ಲಿ ಮದುವೆ, ನೆಮ್ಮದಿಯೇ ಹಾಳಾಗಿದೆ

ಸಂತ್ರಸ್ತ ಯುವಕ ಬರೆದುಕೊಂಡ ಪ್ರಕಾರ, ಆ ಸ್ನೇಹಿತ ನನ್ನ ಕಾಲ್ ಅಥವಾ ಮೆಸೇಜ್ ಸ್ವೀಕರಿಸುತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು ಪಾರ್ಟಿ ಹಾಗೂ ಪ್ರವಾಸದ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾನೆ! ಡಿಸೆಂಬರ್‌ನಲ್ಲಿ ನನಗೆ ಮದುವೆಯಿದ್ದು, ಈ ಹಂತದಲ್ಲಿ 3.5 ಲಕ್ಷ ರೂಪಾಯಿಯ ಹೆಚ್ಚುವರಿ ಹೊರೆ ಹೊರಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಬಿಲ್ ಕಟ್ಟುವ ಸಮಯ ಹತ್ತಿರ ಬಂದಿದ್ದು, ನೆಮ್ಮದಿಯೇ ಹಾಳಾಗಿದೆ” ಎಂದು ಕಣ್ಣೀರಿಟ್ಟಿದ್ದಾನೆ.ನಂತರ ಇತರ ಸ್ನೇಹಿತರ ಬಳಿ ವಿಚಾರಿಸಿದಾಗ, ಆತ ಹಲವರಿಗೂ ಇದೇ ರೀತಿ ನಂಬಿಸಿ ಹಣ ಪೀಕಿರುವ ಹಳೇ ಚಾಳಿ ಬಯಲಾಗಿದೆ.

ಕಾನೂನು ಕ್ರಮಕ್ಕೆ ನೆಟಿಜನ್ನರ ಸಲಹೆ:

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.

ಯುವಕನ ಬಳಿ ವಾಟ್ಸಾಪ್ ಚಾಟ್ ಹಾಗೂ ಹಣಕಾಸಿನ ವಹಿವಾಟಿನ ದಾಖಲೆಗಳಿರುವುದರಿಂದ, ತಡಮಾಡದೇ ಪೊಲೀಸ್ ದೂರು ನೀಡಿ ಅಥವಾ ಲೀಗಲ್ ನೋಟಿಸ್ (Legal Notice) ಕಳುಹಿಸಿ ಹಣ ವಸೂಲಿ ಮಾಡಲು ಪ್ರಯತ್ನಿಸಬೇಕು ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.

ಎಷ್ಟು ಆಪ್ತ ಸ್ನೇಹಿತರಾಗಿದ್ದರೂ ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬಾರದು ಎಂಬ ದೊಡ್ಡ ಪಾಠವನ್ನು ಈ ಘಟನೆ ಒದಗಿಸಿದೆ ಎಂದು ನೆಟಿಜನ್ನರು ಕಿವಿಮಾತು ಹೇಳಿದ್ದಾರೆ.

📄 Official Documents / Supporting Documents

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular