HomeIndiaಕ್ಯಾಸಿನೋ ಡೈರೆಕ್ಟರ್ ಶ್ರೀನಿವಾಸ್ ನಾಯಕ್ ಮೇಲೆ ಗುಂಡಿನ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಉದ್ಯಮಿ

ಕ್ಯಾಸಿನೋ ಡೈರೆಕ್ಟರ್ ಶ್ರೀನಿವಾಸ್ ನಾಯಕ್ ಮೇಲೆ ಗುಂಡಿನ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಉದ್ಯಮಿ

ಪಣಜಿ: ಖ್ಯಾತ ಉದ್ಯಮಿ, ಗೋವಾದ ಕ್ಯಾಸಿನೋ ಡೈರೆಕ್ಟರ್ ಶ್ರೀನಿವಾಸ್ ನಾಯಕ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಶ್ರೀನಿವಾಸ್ ನಾಯಕ್ ಪಾರಾಗಿರುವ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ.

ಶ್ರೀನಿವಾಸ್ ನಾಯಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನವರು. ಗೋವಾದಲ್ಲಿ ಕ್ಯಾಸಿನೋ ಪ್ರೈಡ್, ಮೆಜೆಸ್ಟಿಕ್ ಹೋಟೆಲ್ ನಡೆಸುತ್ತಿದ್ದು, ಮೆಜೆಸ್ಟಿಕ್ ಗ್ರೂಪ್ ನ ಡೈರೆಕ್ಟರ್. ತಡರಾತ್ರಿ ಪಣಜಿಯ ಪೋರ್ವರಿಮ್ ಬಳಿಯ ಮೆಜೆಸ್ಟಿಕ್ ಹೋಟೆಲ್ ಕಾರು ಪಾರ್ಕಿಂಗ್ ಏರಿಯಾದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮದೇ ಮೆಜೆಸ್ಟಿಕ್ ಹೋಟೆಲ್ ನಿಂದ ಹೊರ ಬಂದ ಶ್ರೀನಿವಾಸ್ ನಾಯಕ್ , ಪಾರ್ಕಿಂಗ್ ನಲ್ಲಿ ನಿಲ್ಲಿಸಿಇದ್ದ ಕಾರು ಹತ್ತಲೆಂದು ತೆರಳುತ್ತಿದ್ದರು ಈ ವೇಳೆ ಪಾರ್ಕಿಂಗ್ ಏರಿಯಾದಲ್ಲಿ ಅಡಗಿ ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕ್ಷಣಾರ್ಧದಲ್ಲಿ ಶ್ರೀನಿವಾಸ್ ಎರಡು ಹೆಜ್ಜೆ ಹಿಂದಡಿ ಇಟ್ಟಿದ್ದಾರೆ. ಗುಂಡೇಟಿನಿಂದ ಜಸ್ಟ್ ಎಸ್ಕೇಪ್ ಆಗಿದ್ದಾರೆ. ತಕ್ಷಣ ಅವರ ಭದ್ರತಾ ಸಿಬ್ಬಂದಿಗಳು ದುಷ್ಕರ್ಮಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಕೋರರು ಸ್ಥಳದಿಂದ ಪರಾರಿಗಿದ್ದಾರೆ. ಅದೃಷ್ಟವಶಾತ್ ಶ್ರೀನಿವಾಸ್ ನಾಯಕ್ ಹಾಗೂ ಅವರ ಭದ್ರತಾ ಸಿಬ್ಬಂದಿಗಳು ಗುಂಡಿನ ದಾಳಿಯಿಂದ ಬಚಾವ್ ಆಗಿದ್ದಾರೆ. ಪೋರ್ವರಿಮ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ದಾಳಿಕೋರರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular