HomeAstroದಂಪತಿ ಜಗಳಕ್ಕೆ ಬ್ರೇಕ್ ನೀಡುತ್ತೆ ಬೆಡ್ ರೂಮಿನಲ್ಲಿಡುವ ಈ ಒಂದು ವಸ್ತು

ದಂಪತಿ ಜಗಳಕ್ಕೆ ಬ್ರೇಕ್ ನೀಡುತ್ತೆ ಬೆಡ್ ರೂಮಿನಲ್ಲಿಡುವ ಈ ಒಂದು ವಸ್ತು

ಪತಿ- ಪತ್ನಿ ಸಂಬಂಧ ಅತ್ಯಂತ ಸೂಕ್ಷ್ಮ ಸಂಬಂಧವಾಗಿದೆ. ಈ ಸಂಬಂಧದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೂ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ದೀರ್ಘಕಾಲ ಸಂಬಂಧ ಸಂತೋಷದಿಂದ ಕೂಡಿರಬೇಕೆಂದ್ರೆ ಇಬ್ಬರ ಕಡೆಯಿಂದ ನಿರಂತರ ಪ್ರಯತ್ನ ಅಗತ್ಯ. ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ಸಮಸ್ಯೆ ಉಲ್ಬಣಿಸುತ್ತದೆ. ಈ ಸಮಯದಲ್ಲಿ ವಾಸ್ತು ಶಾಸ್ತ್ರದ ಸಹಾಯ ಪಡೆಯಬಹುದು. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಜೀವನಕ್ಕೆ ಅಗತ್ಯವಿರುವ ಎಲ್ಲ ವಿಷ್ಯಗಳನ್ನು ಹೇಳಲಾಗಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಎಂಬ ಮಾಹಿತಿ ಕೂಡ ಇದೆ.

  • ದಾಂಪತ್ಯ ಜೀವನದಲ್ಲಿ ಸುಖ ಸಿಗಬೇಕು ಎನ್ನುವವರು ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಯಾವಾಗಲೂ ಸುಗಂಧ ದ್ರವ್ಯವನ್ನು ಸಿಂಪಡಿಸಬೇಕು. ಕೋಣೆಯಲ್ಲಿ ಯಾವಾಗಲೂ ಸುಗಂಧದ ಸುಹಾಸನೆ ತುಂಬಿರಬೇಕು. ಇದು ಇಬ್ಬರ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ.
  • ಪ್ರತಿ ಶುಕ್ರವಾರ ನಿಮ್ಮ ಬೆಡ್‌ ರೂಮಿನಲ್ಲಿ ಕೃತಕ ಹೂಗಳನ್ನು ಜೋಡಿಸಿ. ಈ ಹೂವುಗಳ ಮೇಲೆ ಸುಗಂಧ ದ್ರವ್ಯ ಸಿಂಪಡಿಸಿ. ಇದು ಕೋಣೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಧೂಪದ್ರವ್ಯ ಕೂಡ ದಾಂಪತ್ಯ ಸಮಸ್ಯೆಯನ್ನು ಬಗೆಹರಿಸಿ, ಇಬ್ಬರ ಮಧ್ಯೆ ಪ್ರೀತಿ ಹೆಚ್ಚಿಸುತ್ತದೆ. ನೀವು ಭಾನುವಾರ ಮಲಗುವ ಕೋಣೆಯಲ್ಲಿ ಧೂಪವನ್ನು ಹಚ್ಚಿ. ಇದು ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ, ಮನೆಯ ವಾತಾವರಣವನ್ನು ಶಾಂತಗೊಳಿಸುತ್ತದೆ. ಇಬ್ಬರ ಮಧ್ಯೆ ಇರುವ ಭಿನ್ನಾಭಿಪ್ರಾಯ ನಿಧಾನವಾಗಿ ಕಡಿಮೆ ಆಗ್ತಾ ಬರುತ್ತದೆ.
For Latest News Updates, Join Our Whatsapp Community🚩
RELATED ARTICLES

Most Popular