HomeUncategorizedಪಾರ್ಶ್ವವಾಯುಗೆ ಚಿಕಿತ್ಸೆ ನೆಪದಲ್ಲಿ ಜೀರಿಗೆ ಕಷಯಾಯ ನೀಡಿ 70 ಸಾವಿರ ವಂಚನೆ: ಹಣ ದೋಚಿ ಎಸ್ಕೇಪ್...

ಪಾರ್ಶ್ವವಾಯುಗೆ ಚಿಕಿತ್ಸೆ ನೆಪದಲ್ಲಿ ಜೀರಿಗೆ ಕಷಯಾಯ ನೀಡಿ 70 ಸಾವಿರ ವಂಚನೆ: ಹಣ ದೋಚಿ ಎಸ್ಕೇಪ್ ಆದ ಖದೀಮರು

ಬೆಂಗಳೂರು: ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಅಪರಿಚಿತರು ಜೀರಿಗೆ ಕಷಾಯ ಕುಡಿಸಿ 70 ಸಾವಿರ ರೂಪಾಯಿ ಹಣ ದೋಚಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿ ನಡೆದಿದೆ.

ಬೆಂಗಳೂರಿನ ಚಂದ್ರಾಲೇಔಟ್ ಬಳಿಯ ಕಲ್ಯಾಣನಗರ ನಿವಾಸಿ ಲಕ್ಷ್ಮಣ್​ ಎಂಬುವವರಿಗೆ ಅಪರಿಚಿತರಿಬ್ಬರು ವಂಚನೆ ಮಾಡಿದ್ದಾರೆ. ಲಕ್ಷ್ಮಣ್ ಎಂಬುವವರು ಹಲವು ವರ್ಷಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಏನು ಪ್ರಯೋಜನ ಆಗಿರಲಿಲ್ಲ. ಹೀಗಿರುವಾಗ ಅದೊಂದು ವಂಚನೆಯ ಗ್ಯಾಂಗ್ ಇವರ ಬೆನ್ನು ಬಿದ್ದಿದೆ.

ಲಕ್ಷ್ಮಣ್​​ರವರ ಮಾಹಿತಿ ಪಡೆದು ಸಂಪರ್ಕ ಮಾಡಿದ ಖದೀಮರು ಪಾರ್ಶ್ವವಾಯುಗೆ ಚಿಕಿತ್ಸೆ ಕೊಡುತ್ತೇವೆ ಎಂದಿದ್ದಾರೆ. ಇವರ ಮಾತು ನಂಬಿದ ಲಕ್ಷ್ಮಣ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾರ್ಶ್ವವಾಯುಗೆ ಗುಣಪಡಿಸುವುದಾಗಿ ಲಕ್ಷ್ಮಣ್ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರು, ಮೊದಲಿಗೆ ಮಲ್ಲೇಶ್ವರಂನ ಸಿದ್ದಾಶ್ರಮದಿಂದ ಬಂದಿರುವುದಾಗಿ ಹೇಳಿದ್ದಾರೆ. ನಂತರ ಲಕ್ಷಣ್ ಅವರ ಮನೆಯಲ್ಲೇ ಒಂದು ಗ್ಲಾಸ್​ನಲ್ಲಿ ಜೀರಿಗೆ ಕಷಾಯ ರೆಡಿ ಮಾಡಿ ಕುಡಿಸಿದ್ದಾರೆ. ಕಷಾಯ ಕುಡಿದ ನಂತರ ಈ ಕಿರಾತಕರು, ಇನ್ನು 20 ದಿನಗಳಲ್ಲಿ ನೀವು ಎದ್ದು ಓಡಾಡುತ್ತೀರಿ ಅಂತ ನಂಬಿಸಿದ್ದಾರೆ. ಅದಕ್ಕೆ 70 ರೂ ಸಾವಿರ ಖರ್ಚಾಗತ್ತೆ ಅಂತ ಹೇಳಿದ್ದಾರೆ.

ನಾಳೆಯಿಂದ ನಿಮ್ಮ ಮನೆಗೆ ಬಂದು ನಾವೇ ಮಸಾಜ್ ಮಾಡುತ್ತೇವೆ ಅಂತ ನಂಬಿಸಿದ್ದಾರೆ. ಕೇವಲ ಒಂದು ಲೋಟ ಕಷಾಯ ಕೊಟ್ಟು 70 ಸಾವಿರ ರೂ ಹಣ ಪಡೆದು ವಂಚಕರು ಎಸ್ಕೇಪ್ ಆಗಿದ್ದಾರೆ. ಇದಾದನಂತರ, ಯಾವುದೇ ಚಿಕಿತ್ಸೆಯನ್ನ ನೀಡದೆ, ಫೋನ್ ಸ್ವಿಚ್ ಆಫ್ ಮಾಡ್ಕೊಂಡು ನಾಪತ್ತೆಯಾಗಿದ್ದಾರೆ. ಹಣ ಪಡೆದು ನಾಪತ್ತೆಯಾಗುತ್ತಿದಂತೆ ಅನುಮಾನಗೊಂಡ ಲಕ್ಷ್ಮಣ್ ಮಲ್ಲೇಶ್ವರಂನ ಸಿದ್ದಾಶ್ರಮದ ಬಳಿ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ಅಮ್ತಹ ವ್ಯಕ್ತಿಗಳು ಯಾರೂ ಇಲ್ಲ ಎಂಬುದು ಗೊತ್ತಾಗಿದೆ. ತಾವು ಮೋಸ ಹೋಗಿರುವುದನ್ನು ಅರಿತ ಲಕ್ಷ್ಮಣ್ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ವಂಚಕರ ಬಂಧನಕ್ಕೆ ಬಲೆ ಬೀಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular